ವಾಷಿಂಗ್ಟನ್, ಡಿಸಿ: ಭಾರತದ ಮೇಲೆ ಶೇ.50 ರಷ್ಟು ಸುಂಕ ವಿಧಿಸುವ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಿಂದಿನ ಅಮೆರಿಕಾ ಆಡಳಿತದ ದಶಕಗಳ ಪರಿಶ್ರಮವನ್ನು ಹಾಳು ಮಾಡಿದ್ದಾರೆ ಎಂದು ಯುಎಸ್ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಕಿಡಿಕಾರಿದ್ದಾರೆ.
ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗುವಂತೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಎಕ್ಸ್ ಪೋಸ್ಟ್ ಮಾಡಿರುವ ಬೋಲ್ಟನ್ ಅವರು, “ಶ್ವೇತಭವನವು ಅಮೆರಿಕ-ಭಾರತ ಸಂಬಂಧಗಳನ್ನು ದಶಕಗಳ ಹಿಂದಕ್ಕೆ ತಳ್ಳಿದೆ, ಮೋದಿ ಅವರನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗಿಸಿದೆ. ಬೀಜಿಂಗ್ ತನ್ನನ್ನು ಅಮೆರಿಕ ಮತ್ತು ಡೊನಾಲ್ಡ್ ಟ್ರಂಪ್ಗೆ ಪರ್ಯಾಯವಾಗಿ ಬಿಂಬಿಸಿಕೊಂಡಿದೆ” ಎಂದು ಹೇಳಿದ್ದಾರೆ.
ಟ್ರಂಪ್ ಅವರ ಸುಂಕ ನೀತಿಯನ್ನು ಟೀಕಿಸಿದ ಅವರು, ಆಗಿನ ಸೋವಿಯತ್ ಒಕ್ಕೂಟ (ರಷ್ಯಾ) ಜೊತೆಗಿನ ಶೀತಲ ಸಮರದ ಸಂಬಂಧಗಳಿಂದ ಭಾರತವನ್ನು ದೂರವಿಡಲು ಮತ್ತು ಚೀನಾದಿಂದ ಬೆಳೆಯುತ್ತಿರುವ ಬೆದರಿಕೆಯನ್ನು ಪರಿಹರಿಸಲು ದಶಕಗಳಿಂದ ಪಾಶ್ಚಿಮಾತ್ಯ ರಾಷ್ಟ್ರ ಮಾಡಿದ ಪ್ರಯತ್ನಗಳನ್ನು ಟ್ರಂಪ್ ಚೂರುಚೂರು ಮಾಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಟ್ರಂಪ್ ತಮ್ಮ ಆರ್ಥಿಕ ವಿಧಾನದಿಂದ ಕಾರ್ಯತಂತ್ರದ ಲಾಭಗಳನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ, ಈ ನೀತಿಯು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ಪೂರ್ವದಲ್ಲಿ ಭೌಗೋಳಿಕ ರಾಜಕೀಯ ಭೂದೃಶ್ಯವನ್ನು ಮರುರೂಪಿಸಲು ಅವಕಾಶವನ್ನು ನೀಡಿದೆ ಎಂದು ಬೋಲ್ಟನ್ ಆರೋಪಿಸಿದ್ದಾರೆ.
The White House has set U.S.-India relations back decades, pushing Modi closer to Russia and China. Beijing has cast itself as an alternative to the U.S. and Donald Trump.https://t.co/klFKyh1BrK
— John Bolton (@AmbJohnBolton) September 3, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.