ಚೆನ್ನೈ : ಆಂದ್ರ ಪ್ರದೇಶದಲ್ಲಿ ಮಂಗಳವಾರ 20 ಮಂದಿ ರಕ್ತಚಂದನ ಕಳ್ಳಸಾಗಾಣೆದಾರರನ್ನು ಹತ್ಯೆ ಮಾಡಿದ ಪ್ರಕರಣ ಇದೀಗ ಆಂಧ್ರ ಮತ್ತು ತಮಿಳುನಾಡಿನ ನಡುವೆ ಜಟಾಪಟಿಗೆ ಕಾರಣವಾಗಿದೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ತಮಿಳುನಾಡು ಮೂಲದವರಾಗಿದ್ದಾರೆ.
20 ಮಂದಿಯಲ್ಲಿ 12 ಮಂದಿ ತಮಿಳುನಾಡಿನ ತಿರುವಣಮಲೈ ಮತ್ತು ವೆಲ್ಲೂರಿಗೆ ಸೇರಿದವರು ಎನ್ನಲಾಗಿದ್ದು, ಇವರು ಆಂಧ್ರದ ಅರಣ್ಯಕ್ಕೆ ನುಗ್ಗಿ ರಕ್ತಚಂದನದ ಮರವನ್ನು ಕಡಿದು ಕಳ್ಳಸಾಗಾಣೆ ಮಾಡುತ್ತಿದ್ದರು. ಇವರೆಲ್ಲ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ.
ಆಂಧ್ರ ಪೊಲೀಸರು ಇವರನ್ನು ಏಕಾಏಕಿ ಗುಂಡಿಕ್ಕಿ ಹತ್ಯೆ ಮಾಡಿದ್ದು, ಇದಕ್ಕೆ ತಮಿಳು ನಾಡು ಸರ್ಕಾರ ಮತ್ತು ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದೊಂದು ಮಾರಣಹೋಮ ಮತ್ತು ಆಂಧ್ರ ಪೊಲೀಸರ ರೂಪಿಸಿದ ಯೋಜಿತ ಕೊಲೆ ಎಂದು ಅಲ್ಲಿನ ಮಾನವ ಹಕ್ಕು ಸಂಘಟನೆಗಳು ಆರೋಪಿಸಿವೆ.
ಈ ಬಗ್ಗೆ ನಿಖರ ತನಿಖೆ ನಡೆಸಬೇಕು ಎಂದು ತಮಿಳುನಾಡು ಸರ್ಕಾರ ಆಂಧ್ರ ಸರ್ಕಾರವನ್ನು ಒತ್ತಾಯಪಡಿಸಿವೆ. ಹತ್ಯೆಯನ್ನು ಖಂಡಿಸಿ ಚಿತ್ತೋರ್ ಮತ್ತು ಚೆನ್ನೈನಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.