ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ದೇವಾಲಯದ ಮೊದಲ ಮಹಡಿಯಲ್ಲಿ ಇಂದು ರಾಮ ದರ್ಬಾರ್ನ ‘ಪ್ರಾಣ ಪ್ರತಿಷ್ಠೆ’ನಡೆಯುತ್ತಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದರಲ್ಲಿ ಭಾಗಿಯಾಗಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಿಎಂ ಯೋಗಿ, ‘ಪ್ರಾಣ ಪ್ರತಿಷ್ಠೆ’ ಕಾರ್ಯಕ್ರಮವನ್ನು ವೀಕ್ಷಿಸುವ ಅದೃಷ್ಟ ತಮಗೆ ಸಂದಿದೆ. ಇದು ‘ಏಕ ಭಾರತ ಶ್ರೇಷ್ಠ ಭಾರತದ ಅಭಿವ್ಯಕ್ತಿʼ ಎಂದು ಕರೆದಿದ್ದಾರೆ.
“ಭಗವಾನ್ ಶ್ರೀ ರಾಮನ ಪವಿತ್ರ ಜನ್ಮಸ್ಥಳವಾದ ಅಯೋಧ್ಯಾ ಧಾಮದಲ್ಲಿ, ಶ್ರೀ ರಾಮ ಜನ್ಮಭೂಮಿ ದೇವಾಲಯದ ಮೊದಲ ಮಹಡಿಯಲ್ಲಿರುವ ಶ್ರೀ ರಾಮ ದರ್ಬಾರ್ ಸೇರಿದಂತೆ ಎಂಟು ದೇವಾಲಯಗಳಲ್ಲಿ ದೇವರುಗಳ ಪವಿತ್ರ ವಿಗ್ರಹಗಳ ಪ್ರಾಣ-ಪ್ರತಿಷ್ಠೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಮಹಾನ್ ಭಾಗ್ಯ ನನಗೆ ಸಿಕ್ಕಿದೆ. ಈ ಶುಭ ಸಂದರ್ಭವು ‘ಏಕ್ ಭಾರತ್-ಶ್ರೇಷ್ಠ ಭಾರತ’ದ ಹೊಸ ಅಭಿವ್ಯಕ್ತಿಯಾಗಿದೆ. ಸೀತಾಪತಿ ಶ್ರೀ ರಾಮಚಂದ್ರನಿಗೆ ಜಯ!” ಎಂದಿದ್ದಾರೆ.
ಪ್ರಾಣ ಪ್ರತಿಷ್ಠೆ ಸಮಾರಂಭಗಳ ಮೊದಲ ದಿನವಾದ ಇಂದು, ಶ್ರೀ ರಾಮ ಜನ್ಮಭೂಮಿ ಮಂದಿರದ ಮೊದಲ ಮಹಡಿಯಲ್ಲಿರುವ ಶ್ರೀ ರಾಮ ದರ್ಬಾರ್ನಲ್ಲಿ ಪ್ರತಿಷ್ಠಾಪನೆ ಮತ್ತು ಸುತ್ತಮುತ್ತಲಿನ ಅಷ್ಟ ದೇವಾಲಯಗಳಲ್ಲಿರುವ ದೇವತೆಗಳಿಗಾಗಿ ಯಜ್ಞಶಾಲೆಯಲ್ಲಿ ವಿವಿಧ ವೈದಿಕ ಆಚರಣೆಗಳನ್ನು ಜೂನ್ 3ರಿಂದ ವಿಧ್ಯುಕ್ತವಾಗಿ ಪ್ರಾರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.