ನವದೆಹಲಿ: ನಿನ್ನೆ ರಾತ್ರಿ ಸ್ಟಾವಂಜರ್ ಸಿಟಿಯಲ್ಲಿ ನಡೆದ ನಾರ್ವೆ ಚೆಸ್ 2025 ಟೂರ್ನಮೆಂಟ್ನ ಆರನೇ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರು ವಿಶ್ವದ ನಂ. 1 ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿ ಮತ್ತೊಂದು ಮೈಲಿಗಲ್ಲಿನ ಸಾಧನೆ ಮಾಡಿದ್ದಾರೆ. ಇದು ಕಾರ್ಲ್ಸನ್ ವಿರುದ್ಧ ಗುಕೇಶ್ ಅವರ ಮೊದಲ ಕ್ಲಾಸಿಕ್ ಗೆಲುವು.
ಆಟಗಾರ ಎದುರಾಳಿ ಮಾಡಿದ ತಪ್ಪಿನ ಲಾಭವನ್ನು ಗಳಿಸಿದ ಗುಕೇಶ್, ಕ್ಲಾಸಿಕಲ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಕಾರ್ಲ್ಸನ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ವಿಶ್ವದ ನಂ.1 ಆಟಗಾರ ಎನಿಸಿಕೊಂಡಿದ್ದಾರೆ. 6 ನೇ ಸುತ್ತಿನಲ್ಲಿ ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ
ಒಂದು ಹಂತದಲ್ಲಿ, ಕಪ್ಪು ಕಾಯಿಗಳೊಂದಿಗೆ ಕಾರ್ಲ್ಸೆನ್ ಗೆಲುವಿನ ಹಾದಿಯಲ್ಲಿದ್ದಾರೆ ಎಂಬಂತೆ ತೋರಿತ್ತು. ಆದರೆ ಗುಕೇಶ್ ಬಿಟ್ಟುಕೊಡದೆ ಹೋರಾಟ ಮುಂದುವರೆಸಿದರು, ಮತ್ತು ಕಾರ್ಲ್ಸನ್ ಅವರ ಅನುಕೂಲ ನಿಧಾನವಾಗಿ ಕಣ್ಮರೆಯಾಯಿತು. ನಂತರ, ಇಬ್ಬರೂ ಸಮಯದ ಒತ್ತಡದಲ್ಲಿದ್ದಾಗ, ಕಾರ್ಲ್ಸನ್ ಒಂದು ದೊಡ್ಡ ತಪ್ಪು ಮಾಡಿದರು, ಅದು ಅವರ ಸೋಲಿಗೆ ಕಾರಣವಾಯಿತು.
ಈ ಗೆಲುವಿನೊಂದಿಗೆ, ಗುಕೇಶ್ 8.5 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ ಮತ್ತು ಈಗ ವಿಶ್ವದ ನಂ.1 ಮತ್ತು ಅಮೇರಿಕನ್ ಫ್ಯಾಬಿಯಾನೊ ಕರುವಾನಾ ಅವರಿಗಿಂತ ಕೇವಲ ಒಂದು ಅಂಕದಿಂದ ಹಿಂದುಳಿದಿದ್ದಾರೆ.
The World Champion showed the true meaning of "Win with Grace"! He has the heart of a warrior! Knowing that he was in big trouble both on the board and on the clock, he fought as hard as he could to survive, and was rewarded with a big victory! 👏 https://t.co/TaY6AR24PU
— Susan Polgar (@SusanPolgar) June 1, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.