ನವದೆಹಲಿ: ಪಾಕಿಸ್ಥಾನನದೊಂದಿಗಿನ ಇತ್ತೀಚಿನ ಸಂಘರ್ಷವನ್ನು ನಿಭಾಯಿಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನೆ ಮಾಡಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿ ಟೀಕಾಸ್ತ್ರ ಪ್ರಯೋಗಿಸಿದೆ.
ಹೈದರಾಬಾದ್ನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ್ದ ರೆಡ್ಡಿ, ಆಪರೇಷನ್ ಸಿಂದೂರ್ ವೇಳೆ ಭಾರತ ಎಷ್ಟು ರಫೆಲ್ ಕಳೆದುಕೊಂಡಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ರಾಷ್ಟ್ರೀಯ ವಿರೋಧಿ ನಿರೂಪಣೆಗಳನ್ನು ರೆಡ್ಡಿ ಪ್ರತಿಧ್ವನಿಸುತ್ತಿದ್ದಾರೆ ಮತ್ತು ಸಶಸ್ತ್ರ ಪಡೆಗಳ ಸ್ಥೈರ್ಯವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದೆ
ಸಂಘರ್ಷದಲ್ಲಿ ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿರುವ ಬಗ್ಗೆ ಇದುವರೆಗೆ ಭಾರತೀಯ ವಾಯುಪಡೆ ಯಾವುದೇ ದೃಢೀಕರಣಗಳನ್ನು ನೀಡಿಲ್ಲ, ಹೀಗಿದ್ದರೂ ರೆಡ್ಡಿಯಂತಹ ಕಾಂಗ್ರೆಸ್ ನಾಯಕರು ನಿತ್ಯ ರಫೇಲ್ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದ್ದಾರೆ.
ರೆಡ್ಡಿ ಅವರ ಹೇಳಿಕೆಗಳಿಗೆ ಕಠಿಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷವು ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ತೆಲಂಗಾಣ ಎಕ್ಸ್ ಪೋಸ್ಟ್ ಮಾಡಿದ್ದು, “ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೇವಲ ರಫೇಲ್ ಮತ್ತು ಆಪರೇಷನ್ ಸಿಂದೂರ್ ಕುರಿತು ಪಾಕಿಸ್ಥಾನದ ನಿರೂಪಣೆಗಳನ್ನು ಪ್ರತಿಧ್ವನಿಸುತ್ತಿಲ್ಲ. ಅವರು ಒಂದು ಹೆಜ್ಜೆ ಮುಂದೆ ಹೋಗಿ ‘ನಮ್ಮ ಪಾಕಿಸ್ಥಾನ’ ಎಂದಿದ್ದಾರೆ. ರೇವಂತ್ ಅವರೇ ರಾಷ್ಟ್ರೀಯ ಭದ್ರತೆ ನಿಮ್ಮ ರ್ಯಾಂಪ್ ಅಲ್ಲ, ನೀವು ವಿಶ್ವಸುಂದರಿಯರ ಸ್ಪರ್ಧೆಯಲ್ಲಿ ಫೋಟೋ ತೆಗೆಸಿಕೊಳ್ಳುವುದಕಷ್ಟೇ ಲಾಯಕ್. ಸೇನಾ ಪಡೆಗಳನ್ನು ಅವಮಾನಿಸುವುದು ಕಾಂಗ್ರೆಸ್ ಡಿಎನ್ಎನಲ್ಲಿಯೇ ಇದೆ” ಎಂದಿದ್ದಾರೆ.
CM Revanth Reddy didn’t just echo Pakistan’s narrative on Rafale and #OperationSindoor — he went a step further, calling it “Mana Pakistan" meaning "Our Pakistan".
From questioning Surgical Strikes and Balakot to mocking our armed forces and opposing Agnipath – standing against… pic.twitter.com/pWCl4AP4lV
— BJP Telangana (@BJP4Telangana) May 30, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.