ನವದೆಹಲಿ: ಕಳೆದ ದಶಕದಲ್ಲಿ ಭಾರತವು ತನ್ನ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯದಲ್ಲಿ ಮೂರು ಪಟ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ದೊಡ್ಡ ಜಲವಿದ್ಯುತ್ ಸ್ಥಾವರಗಳು ಸೇರಿದಂತೆ ಸ್ಥಾಪಿತ ಹಸಿರು ಇಂಧನ ಸಾಮರ್ಥ್ಯವು 232GW ತಲುಪಿದೆ, ಮಾರ್ಚ್ 2014 ರಲ್ಲಿ ಭಾರತದ ಸ್ಥಾಪಿತ ಹಸಿರು ಇಂಧನ ಸಾಮರ್ಥ್ಯ 75.52GW ಇತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಾರ್ಚ್ 2014 ರಲ್ಲಿ, ಭಾರತದ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯವು 2.82 GW ಆಗಿತ್ತು, ಅದು ಈಗ 108 GW ಅನ್ನು ದಾಟಿದೆ, ಈ ಮೂಲಕ ಹಲವು ಪಟ್ಟು ಬೆಳವಣಿಗೆಯನ್ನು ದಾಖಲಿಸಿದೆ. 2014 ರಲ್ಲಿ 21 GW ಇದ್ದ ಪವನ ಶಕ್ತಿಯ ಸಾಮರ್ಥ್ಯವು ಪ್ರಸ್ತುತ ದ್ವಿಗುಣಗೊಂಡಿದ್ದು, 51GW ಗೆ ತಲುಪಿದೆ.
ಯುಪಿಎ ಆಡಳಿತದ ಅವಧಿಯಲ್ಲಿ, ಭಾರತದ ಸೌರ ಉತ್ಪಾದನಾ ಕ್ಷೇತ್ರ ಬಹುತೇಕ ಅನುಪಸ್ಥಿತವಾಗಿತ್ತು, 2014 ರಲ್ಲಿ ಕೇವಲ 2GW ಸೌರ ಮಾಡ್ಯೂಲ್ ಉತ್ಪಾದನೆ ಮಾತ್ರ ಇತ್ತು ಎಂದು ಮೂಲಗಳು ತಿಳಿಸಿವೆ.
2024 ರಲ್ಲಿ ಭಾರತವು ಜಾಗತಿಕ ನಾಯಕನಾಗಿ ಮಾರ್ಪಟ್ಟಿದೆ, ಸೌರ ಮಾಡ್ಯೂಲ್ ಉತ್ಪಾದನೆಯು 90GW ಗೆ ಏರಿದೆ ಮತ್ತು 2030 ರ ವೇಳೆಗೆ 150GW ಅನ್ನು ತಲುಪುವ ನಿರೀಕ್ಷೆ ಇದೆ.
2014 ರಲ್ಲಿ, ಭಾರತವು ಸೌರ ಘಟಕಗಳು ಮತ್ತು ವೇಫರ್ಗಳ ದೇಶೀಯ ಉತ್ಪಾದನೆ ಬಹುತೇಕ ಶೂನ್ಯವಾಗಿತ್ತು, ಇದು ಹಿಂದಿನ ಸರ್ಕಾರದ ನೀತಿಯ ಸಂಪೂರ್ಣ ವೈಫಲ್ಯವಾಗಿತ್ತು. ಆದರೆ 2014 ರ ಬಳಿಕ ಭಾರತದ ಸೌರ ಶಕ್ತಿ ಉತ್ಪಾದನೆಯಲ್ಲಿ ಆಭರೀ ಪ್ರಮಾಣದ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.