ಇಸ್ಲಾಮಾಬಾದ್: ಪಾಕಿಸ್ಥಾನದ ಫೀಲ್ಡ್ ಮಾರ್ಷಲ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಈಗ ಜಗತ್ತಿನ ಮುಂದೆ ನಗೆಪಾಟಲಿಗೀಡಾಗುತ್ತಿದ್ದಾನೆ. ಭಾರತದ ʼಆಪರೇಷನ್ ಸಿಂದೂರ್ಗೆ ಪ್ರತಿಕಾರವಾಗಿ ಪಾಕಿಸ್ಥಾನ ನಡೆಸಿದೆ ಎನ್ನಲಾದ ʼಆಪರೇಷನ್ ಬನ್ಯನ್ ಅಲ್-ಮಾರ್ಸಸ್ʼನ ಚಿತ್ರ ಎಂದು ಹೇಳಿಕೊಂಡು ಪ್ರಧಾನಿ ಶೆಹಬಾಜ್ ಷರೀಫ್ಗೆ ಈತ ಚೀನಾದ ಮಿಲಿಟರಿ ಕವಾಯತಿನ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾನೆ.
ಈತ ನೀಡಿರುವ ಈ ಉಡುಗೊರೆ ಜಗತ್ತಿನ ಮುಂದೆ ಪಾಕಿಸ್ಥಾನದ ಬಾಲಿಶತನವನ್ನು ಜಗಜ್ಜಾಹೀರು ಮಾಡಿದೆ. ಮಾತ್ರವಲ್ಲದೇ ಆ ದೇಶಕ್ಕೆ ಮುನೀರ್ ನಡೆ ಮತ್ತೊಂದು ದೊಡ್ಡ ಮುಜುಗರವನ್ನು ತಂದಿದೆ.
ವರದಿಗಳ ಪ್ರಕಾರ, ಜನರಲ್ ಮುನೀರ್ ನೀಡಿದ ಚಿತ್ರವು ಕಳೆದ ಕೆಲವು ವರ್ಷಗಳಿಂದ ಹಲವಾರು ಬಾರಿ ಹಂಚಿಕೊಳ್ಳಲಾದ ಹಳೆಯ ಚಿತ್ರ. ಈ ಚಿತ್ರವನ್ನು ಮೊದಲು 2019 ಹಂಚಿಕೊಳ್ಳಲಾಗಿತ್ತು. ಈ ಚಿತ್ರವನ್ನು ಛಾಯಾಗ್ರಾಹಕ ಹುವಾಂಗ್ ಹೈ ಅವರು ಸೆರೆಹಿಡಿದಿದ್ದಾಗಿದ್ದು, ಇದು ಚೀನಾ ಮೂಲದ ಬಹು ರಾಕೆಟ್ ಲಾಂಚರ್ ಆಗಿರುವ PHL-03 ನದ್ದಾಗಿದೆ.
ಮಾಧ್ಯಮ ವರದಿಯ ಪ್ರಕಾರ, ಪಾಕಿಸ್ಥಾನ ಸೇನಾ ಮುಖ್ಯಸ್ಥರು ಆಯೋಜಿಸಿದ್ದ ಹೈ ಪ್ರೊಫೈಲ್ ಭೋಜನಕೂಟದಲ್ಲಿ ಈ ಚಿತ್ರವನ್ನು ಷರೀಫ್ ಅವರಿಗೆ ಉಡುಗೊರೆ ನೀಡಲಾಗಿದೆ.
ಮೇ 9 ಮತ್ತು 10 ರ ಮಧ್ಯರಾತ್ರಿ ಭಾರತ ನಡೆಸಿದ ʼಆಪರೇಷನ್ ಸಿಂದೂರ್ʼ ದಾಳಿಯಲ್ಲಿ 11 ಪಾಕಿಸ್ಥಾನಿ ವಾಯುನೆಲೆಗಳು ನಾಶವಾಗಿವೆ. ವರದಿಗಳ ಪ್ರಕಾರ, ಭಾರತೀಯ ದಾಳಿಯಲ್ಲಿ ವಿಮಾನ ಹ್ಯಾಂಗರ್ಗಳು ಸಹ ನಾಶವಾಗಿವೆ. ಆದರೆ ಪಾಕಿಸ್ಥಾನ ಮಾತ್ರ ತಾನೇ ಭಾರತದ ಮೇಲೆ ಮೇಲುಗೈ ಸಾಧಿಸಿದ್ದೇನೆ ಎಂದು ಹೇಳಿಕೊಂಡು ನಕಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಿದೆ.
ಆಪರೇಷನ್ ಬನ್ಯನ್ ಅಲ್-ಮಾರ್ಸಸ್ ಎಂದು ಹೇಳಿ ಉಡುಗೊರೆ ನೀಡಲಾದ ಹಳೆಯ ಚಿತ್ರಕ್ಕೆ ಈಗ ನೆಟಿಜನ್ಗಳು ಜನರಲ್ ಮುನೀರ್ ಮತ್ತು ಶೆಹಬಾಜ್ ಷರೀಫ್ ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ.
Pakistan's latest masterpiece: Shehbaz Sharif presents a photoshopped painting from a 2019 Chinese drill to Failed Marshal Asim Munir 🎨💥
Guess when you can’t win on the battlefield, you win in Canva #LumberOneFauj pic.twitter.com/pteqdcsGqV
— Yash Rawat (@Yashfacts28) May 25, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.