ನವದೆಹಲಿ: ಸಿಐಎಸ್ಎಫ್ನ 56 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಬ್ ಇನ್ಸ್ಪೆಕ್ಟರ್ ಗೀತಾ ಸಮೋಟಾ ಅವರು ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಏರಿದ ಮೊದಲ ಸಿಐಎಸ್ಎಫ್ ಸಿಬ್ಬಂದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಸೋಮವಾರ 8,849 ಮೀಟರ್ ಎತ್ತರದ ಪರ್ವತವನ್ನು ಏರಿ ಸಾಹಸ ಮೆರೆದಿದ್ದಾರೆ.
“ಇದು ಕೇವಲ ವೈಯಕ್ತಿಕ ವಿಜಯವಲ್ಲ, ಸಿಐಎಸ್ಎಫ್ ಮತ್ತು ಭಾರತದ ಅದ್ಭುತ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯನ್ನು ಸಂಕೇತಿಸುವ ವಿಜಯೋತ್ಸವದ ಕ್ಷಣವಾಗಿದೆ” ಎಂದು ಸಿಐಎಸ್ಎಫ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
35 ವರ್ಷದ ಸಬ್ ಇನ್ಸ್ಪೆಕ್ಟರ್ ಗೀತಾ 2011 ರಲ್ಲಿ ಅರೆಸೈನಿಕ ಪಡೆಗೆ ಸೇರಿದರು ಮತ್ತು ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನ ಉದಯಪುರ ವಿಮಾನ ನಿಲ್ದಾಣ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪರ್ವತಾರೋಹಿ ಗೀತಾ ರಾಜಸ್ಥಾನದ ಸಿಕಾರ್ ಜಿಲ್ಲೆಯ ಚಕ್ ಹಳ್ಳಿಯಿಂದ ಬಂದವರು ಮತ್ತು ತಮ್ಮ ಸ್ಥಳೀಯ ಕಾಲೇಜಿನಲ್ಲಿ ಹಾಕಿ ಆಟಗಾರ್ತಿಯಾಗಿ ಕೀರ್ತಿ ಪಡೆದಿದ್ದರು. ನಂತರ ಗಾಯದಿಂದಾಗಿ ಅವರು ಹಾಕಿಯಿಂದ ದೂರ ಸರಿಯಬೇಕಾಯಿತು. ನಂತರ CISF ಗೆ ಸೇರ್ಪಡೆಗೊಂಡರು. ಆ ಪಡೆಯಲ್ಲಿ ಪರ್ವತಾರೋಹಣ ತಂಡ ಇರಲಿಲ್ಲ. ಹೀಗಾಗಿ ಸಮೋಟಾ ಪರ್ವತಾರೋಹಣದಲ್ಲಿ ವಿಶೇಷ ತರಬೇತಿಯನ್ನು ಪಡೆದರು ಮತ್ತು 2019 ರಲ್ಲಿ ಅವರು ಉತ್ತರಾಖಂಡದ ಮೌಂಟ್ ಸತೋಪಂತ್ (7,075 ಮೀಟರ್) ಮತ್ತು ನೇಪಾಳದ ಮೌಂಟ್ ಲೋಬುಚೆ (6,119 ಮೀಟರ್) ಅನ್ನು ಏರಿದರು. ಈ ಮೂಲಕ ಈ ಸಾಧನೆ ಮಾಡಿದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF)ಯ ಮೊದಲ ಮಹಿಳೆಯಾದರು.
"CISF की नारी शक्ति की ऐसी मिसाल, जिसने छू लिया आसमान और बना दी नई पहचान।"
DG #CISF and all ranks congratulate L/SI Geeta Samota of CISF Unit, Udaipur Airport, on successfully scaling Mount Everest (8,848 m), the highest peak in the world.
She has not only brought immense pride… pic.twitter.com/tL1I32uazs— CISF (@CISFHQrs) May 20, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.