ನವದೆಹಲಿ: ಪಹಲ್ಗಾಮ್ ದಾಳಿಗೆ ʼಆಪರೇಷನ್ ಸಿಂಧೂರ್ʼ ಮೂಲಕ ಭಾರತ ತಕ್ಕ ಪ್ರತಿಕಾರವನ್ನೇ ತೀರಿಸಿಕೊಂಡಿದೆ. ದಾಳಿ ನಡೆದ ಕೇವಲ 15 ದಿನಗಳಲ್ಲಿ ಪರಮ ಶತ್ರು, ಉಗ್ರ ಪೋಷಕ ಪಾಕಿಸ್ಥಾನಕ್ಕೆ ಅರಗಿಸಿಕೊಳ್ಳಲಾಗದ ತಿರುಗೇಟು ದೊರೆತಿದೆ. ಶತ್ರುಗಳ ಅಡ್ಡಾದೊಳಗೆ ನುಗ್ಗಿ ಹೊಡೆಯುವ ತಾಕತ್ತು ನವ ಭಾರತಕ್ಕಿದೆ ಎಂಬ ಸಂದೇಶ ಜಗತ್ತಿಗೆ ದೊರೆತಿದೆ. ಮೇ.7 ರ ಮಧ್ಯರಾತ್ರಿ ಭಾರತದ ಹೆಮ್ಮೆಯ ವಾಯುಸೇನೆ ತನ್ನ ಶಕ್ತಿಶಾಲಿ ರಫೇಲ್ ಯುದ್ಧವಿಮಾನಗಳನ್ನು ಬಳಸಿಕೊಂಡು ಪಿಒಕೆ ಮತ್ತು ಪಾಕಿಸ್ಥಾನದಲ್ಲಿರುವ ಭಯೋತ್ಪಾದಕ ಅಡಗು ತಾಣಗಳನ್ನು ಚಿಂದಿ ಚಿಂದಿ ಮಾಡಿ ಹಾಕಿದೆ.
ಭಾರತ ದಾಳಿ ನಡೆಸಿದ ಸ್ಥಳಗಳ ವಿವರ ಇಲ್ಲಿದೆ:
1 ʼಮರ್ಕಝ್ ಸುಬಾನ್ ಅಲ್ಲಾʼ ಇದು ಪಾಕಿಸ್ಥಾನದ ಬಹವಲ್ಪುರ್ ಪ್ರದೇಶದಲ್ಲಿದ್ದು, ಇಲ್ಲಿ ಜೈಶೇ ಇ ಮೊಹಮ್ಮದ್ ಉಗ್ರರ ನೆಲೆಯಾಗಿದ್ದ ಮಸೀದಿಯ ಮೇಲೆ ಭಾರತ ದಾಳಿ ಮಾಡಿ ಉಗ್ರರನ್ನು ಸದೆ ಬಡಿದಿದೆ.
2 ʼಮರ್ಕಝ್ ತೈಬಾʼ ಇದು ಪಾಕಿಸ್ಥಾನದ ಮುರಿಡ್ಕೆ ಪ್ರದೇಶದಲ್ಲಿದ್ದು, ಲಷ್ಕರ್ ಇ ತೊಯ್ಬಾ ಉಗ್ರರ ನೆಲೆಯಾಗಿತ್ತು, 26/11 ಮುಂಬೈ ದಾಳಿಯ ಭಯೋತ್ಪಾದಕರು ಇಲ್ಲಿಂದಲೇ ಬಂದಿದ್ದಾರೆ. ಭಾರತದ ರಫೇಲ್ ದಾಳಿಗೆ ಈ ಪ್ರದೇಶ ಈಗ ಅವಶೇಷವಾಗಿದೆ.
3 ʼಸರ್ಜಲ್ʼ ಇದು ಪಾಕಿಸ್ಥಾನದ ತೆಹ್ರಾ ಕಲನ್ ಪ್ರದೇಶದಲ್ಲಿದ್ದು, ಸಾಂಬಾ-ಕಥುವಾ ಎದುರಿನ ಅಂತಾರಾಷ್ಟ್ರೀಯ ಗಡಿಯ ಒಳಗೆ 8 ಕಿ.ಮೀ. ದೂರದಲ್ಲಿದೆ. ಇಲ್ಲಿ ಜೈಶೇ ಇ ಮೊಹಮ್ಮದ್ ಉಗ್ರರ ಅಡಗು ತಾಣವನ್ನು ಭಾರತ ಚಿಂದಿ ಮಾಡಿದೆ
4 ʼಮೆಹಮೂನ ಜೋಯʼ ಇದು ಪಾಕಿಸ್ಥಾನದ ಸಿಯಲ್ಕೋಟ್ ಪ್ರದೇಶದಲ್ಲಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಉಗ್ರರಿಗೆ ನೆಲೆಯಾಗಿತ್ತು. ಅಂತಾರಾಷ್ಟ್ರೀಯ ಗಡಿಯ ಒಳಗೆ 15 ಕಿ.ಮೀ. ದೂರದಲ್ಲಿ ಈ ಪ್ರದೇಶವಿದ್ದು, ಹಿಜ್ಬುಲ್ ಮುಜಾಹಿದ್ದೀನ್ನ ತರಬೇತಿ ಕೇಂದ್ರದ ಮೇಲೆಯೇ ಭಾರತ ದಾಳಿ ಮಾಡಿದೆ..
5 ʼಮಜ್ದಿದ್ ಅಹ್ಲೆ ಹದಿತ್ʼ ಇದು ಪಾಕಿಸ್ಥಾನ ಆಕ್ರಮಿತ ಜಮ್ಮು-ಕಾಶ್ಮೀರದ ಬರ್ನಾಲ ಪ್ರದೇಶದಲ್ಲಿದ್ದು, ಲಷ್ಕರ್ ಇ ತೋಯ್ಬಾ ಉಗ್ರರ ಅಡಗುತಾಣವಾಗಿತ್ತು, ಭಾರತದ ದಾಳಿಗೆ ಇಲ್ಲಿ ಅನೇಕ ಉಗ್ರರು ನೆಲಕಚ್ಚಿದ್ದಾರೆ.
6 ʼಮಜ್ದೀದ್ ಅಬ್ಬಾಸ್ʼ ಪಾಕಿಸ್ಥಾನ ಆಕ್ರಮಿತ ಜಮ್ಮು-ಕಾಶ್ಮೀರದ ಕೊಟ್ಲಿಯಲ್ಲಿ ಈ ಪ್ರದೇಶವಿದ್ದು, ಜೈಶೇ ಇ ಮೊಹಮ್ಮದ್ ಉಗ್ರರಿಗೆ ನೆಲೆ ಕಲ್ಪಿಸಿತ್ತು. ಈ ಪ್ರದೇಶವೀಗ ಸ್ಮಶಾನವಾಗಿ ಪರಿವರ್ತನೆಗೊಂಡಿದೆ
7 ʼಮಸ್ಕಾರ್ ರಹೀಲ್ ಶಹೀದ್ʼ ಪಾಕಿಸ್ಥಾನ ಆಕ್ರಮಿತ ಜಮ್ಮು-ಕಾಶ್ಮೀರದ ಕೊಟ್ಲಿ ಪ್ರದೇಶದಲ್ಲಿದ್ದು, ಹಿಜ್ಬುಲ್ ಮುಜಾಹಿದ್ದೀನ್ ನೆಲೆಬೀಡಾಗಿತ್ತು. ಭಾರತದ ಕ್ಷಿಪಣಿ ದಾಳಿಗೆ ಈ ಪ್ರದೇಶವೀಗ ತತ್ತರಿಸಿ ಹೋಗಿದೆ.
8 ʼಶಾವೈ ನಲ್ಲಾ ಕ್ಯಾಂಪ್ʼ ಪಾಕಿಸ್ಥಾನ ಆಕ್ರಮಿತ ಜಮ್ಮು-ಕಾಶ್ಮೀರದ ಮುಜಾಫರಬಾದ್ ಪ್ರದೇಶದಲ್ಲಿದ್ದು, ಲಷ್ಕರ್ ಇ ತೊಯ್ಬಾ ಉಗ್ರರ ಅಡಗು ತಾಣವಾಗಿದ್ದ ಮಸೀದಿಯನ್ನು ಭಾರತದ ಕ್ಷಿಪಣಿಗಳು ಛಿದ್ರ ಮಾಡಿವೆ
9 ʼಸೈದ್ನಾ ಬಿಲಾಲ್ ಕ್ಯಾಂಪ್ʼ ಪಾಕಿಸ್ಥಾನ ಆಕ್ರಮಿತ ಜಮ್ಮು-ಕಾಶ್ಮೀರದ ಮುಜಾಫರಬಾದ್ ಪ್ರದೇಶದಲ್ಲಿದ್ದು, ಇಲ್ಲಿದ್ದ ಜೈಶೇ ಇ ಮೊಹಮ್ಮದ್ ಉಗ್ರರ ಲಾಂಚ್ ಪ್ಯಾಡ್ ೀಗ ಸರ್ವನಾಶವಾಗಿದೆ.
ಭಾರತದ ಈ ಯೋಜನಾಬದ್ಧ ದಾಳಿಗಳು ಉಗ್ರರ ನೆಲೆಬೀಡು ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಿದೆ. ಅದೇನೆಯಿರಲಿ ಪಾಕಿಸ್ಥಾನದ ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ನೀಡಲು ದೃಢಸಂಕಲ್ಪ ಮಾಡಿರುವ ಭಾರತ ಎಂತಹ ಸಂದರ್ಭ ಎದುರಾದರೂ ಹೆಮ್ಮೆಟ್ಟುವುದಿಲ್ಲ ಎಂಬ ದಿಟ್ಟ ಸಂದೇಶ ರವಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.