ನವದೆಹಲಿ: ಭಾರತದಲ್ಲಿ UPI (ಏಕೀಕೃತ ಪಾವತಿ ಇಂಟರ್ಫೇಸ್) ಸೇವೆಗಳು ಇಂದು ಶನಿವಾರ ಬೆಳಿಗ್ಗೆ ತೀವ್ರ ಅಡಚಣೆಯನ್ನು ಎದುರಿಸಿದೆ, ಹೀಗಾಗಿ ಬಳಕೆದಾರರು ಡಿಜಿಟಲ್ ಹಣಕಾಸು ವಹಿವಾಟುಗಳನ್ನು ನಡೆಸಲು ಪರದಾಡುವಂತಾಗಿದೆ. ಒಂದು ತಿಂಗಳೊಳಗೆ ಮೂರನೇ ಬಾರಿಗೆ ಈ ರೀತಿಯಾಗಿ ಯುಪಿಐ ಅಡಚಣೆ ಎದುರಿಸುತ್ತಿದೆ. ಇದರಿಂದಾಗಿ ಸುಗಮ ಹಣ ವರ್ಗಾವಣೆ ಬಾಧಿಸಲ್ಪಡುತ್ತಿದೆ, ದೈನಂದಿನ ಸೇವೆಗೆ ಅಡ್ಡಿಪಡಿಸುತ್ತಿದೆ.
ಡೌನ್ಡೆಟೆಕ್ಟರ್ ವರದಿಗಳ ಪ್ರಕಾರ, ಈ ಸಮಸ್ಯೆ ದೇಶದಾದ್ಯಂತ ಗೋಚರಿಸಿದ್ದು, ಮಧ್ಯಾಹ್ನದ ವೇಳೆಗೆ ಸುಮಾರು 1,168 ದೂರುಗಳು ದಾಖಲಾಗಿವೆ. Google Pay ಬಳಕೆದಾರರು 96 ಸಮಸ್ಯೆಗಳ ಬಗ್ಗೆ ದೂರು ನೀಡಿದರೆ, Paytm ಬಳಕೆದಾರರು 23 ದೂರುಗಳನ್ನು ಸಲ್ಲಿಸಿದ್ದಾರೆ. ಅಡಚಣೆಯ ಹಿಂದಿನ ಕಾರಣ ಇನ್ನೂ ತಿಳಿದಿಲ್ಲ.
ಈ ನಡುವೆ, NPCI ವಹಿವಾಟು ಸಮಸ್ಯೆಗಳನ್ನು ಎದುರಿಸುತ್ತಿರುವ ಬಳಕೆದಾರರ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದ್ದು, “NPCI ಪ್ರಸ್ತುತ ಮಧ್ಯಂತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ, ಇದು ಭಾಗಶಃ UPI ವಹಿವಾಟು ಕುಸಿತಕ್ಕೆ ಕಾರಣವಾಗುತ್ತದೆ. ಸಮಸ್ಯೆಯನ್ನು ಪರಿಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ನಿಮಗೆ ಅಪ್ಡೇಟ್ ನೀಡುತ್ತೇವೆ. ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ” ಎಂದಿದೆ.
NPCI is currently facing intermittent technical issues, leading to partial UPI transaction declines. We are working to resolve the issue, and will keep you updated.
We regret the inconvenience caused.
— NPCI (@NPCI_NPCI) April 12, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.