ಲಕ್ನೋ: ಮೊಘಲ್ ದೊರೆ ಔರಂಗಜೇಬನ ಗುಣಗಾನ ಮಾಡಿದ್ದ ಸಮಾಜವಾದಿ ಪಕ್ಷ ಮತ್ತು ಅದರ ಮಹಾರಾಷ್ಟ್ರ ಶಾಸಕ ಅಬು ಅಜ್ಮಿ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಸಮಾಜವಾದಿ ಪಕ್ಷವನ್ನು ಖಂಡಿಸುತ್ತಾ ಅಬು ಅಜ್ಮಿಯನ್ನು ಪಕ್ಷದಿಂದ ತೆಗೆದುಹಾಕುವಂತೆ ಮತ್ತು ಉತ್ತರ ಪ್ರದೇಶಕ್ಕೆ ಚಿಕಿತ್ಸೆಗಾಗಿ ಕರೆತರುವಂತೆ ಕೇಳಿಕೊಂಡಿದ್ದಾರೆ.
“ಸಮಾಜವಾದಿ ಪಕ್ಷದಿಂದ ಅವರನ್ನು ತೆಗೆದುಹಾಕಿ ಉತ್ತರ ಪ್ರದೇಶಕ್ಕೆ ಕಳುಹಿಸಿ, ನಾವು ಅವರಿಗೆ ಚಿಕಿತ್ಸೆ ನೀಡುತ್ತೇವೆ. ಸಮಾಜವಾದಿ ಮಹಾಕುಂಭವನ್ನು ದೂಷಿಸುತ್ತಲೇ ಇದೆ, ಅದರ ಶಾಸಕರು ದೇವಾಲಯವನ್ನು ನಾಶಮಾಡಿದ ವ್ಯಕ್ತಿಯನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಅವರನ್ನು ಆರಾಧ್ಯ ದೈವವೆಂದು ಪರಿಗಣಿಸುತ್ತಿದ್ದಾರೆ” ಎಂದಿದ್ದಾರೆ.
“ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯ ಬಗ್ಗೆ ನಾಚಿಕೆಪಡುವ ವ್ಯಕ್ತಿ, ಔರಂಗಜೇಬ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತಿದ್ದಾನೆ, ಆತನಿಗೆ ನಮ್ಮ ದೇಶದಲ್ಲಿ ಉಳಿಯುವ ಹಕ್ಕಿದೆಯೇ? ಸಮಾಜವಾದಿ ಪಕ್ಷವು ಇದಕ್ಕೆ ಉತ್ತರಿಸಬೇಕು. ಒಂದೆಡೆ, ನೀವು ಮಹಾಕುಂಭವನ್ನು ದೂಷಿಸುತ್ತಲೇ ಇರುತ್ತೀರಿ. ಮತ್ತೊಂದೆಡೆ, ದೇಶದ ದೇವಾಲಯಗಳನ್ನು ನಾಶಪಡಿಸಿದ ಔರಂಗಜೇಬ್ನಂತಹ ವ್ಯಕ್ತಿಯನ್ನು ನೀವು ಹೊಗಳುತ್ತೀರಿ. ನಿಮ್ಮ ಆ ಶಾಸಕನನ್ನು ನೀವು ಏಕೆ ನಿಯಂತ್ರಿಸಲು ಸಾಧ್ಯವಿಲ್ಲ? ಅವರ ಹೇಳಿಕೆಯನ್ನು ನೀವು ಏಕೆ ಖಂಡಿಸಲಿಲ್ಲ?” ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದಾರೆ.
#WATCH | Lucknow: On Samajwadi party MLA Abu Azmi's statement on Aurangzeb, which he later withdrew, UP CM Yogi Adityanath says, " Remove that person from (Samajwadi) party and send him to UP, we will do his treatment. The person who feels ashamed about the heritage of… pic.twitter.com/SHXClYoyaz
— ANI (@ANI) March 5, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.