ತ್ರಿಪುರಾ: ಇಂಡೋ-ಬಾಂಗ್ಲಾ ಅಂತರಾಷ್ಟ್ರೀಯ ಗಡಿಯಲ್ಲಿ ಬೃಹತ್ ಕಳ್ಳಸಾಗಾಣಿಕೆ ಪ್ರಯತ್ನವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮಹಿಳಾ ಯೋಧೆಯರು ವಿಫಲಗೊಳಿಸಿದ್ದಾರೆ. ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ಅಶಾಬರಿ ಗಡಿ ಹೊರಠಾಣೆಯ ರಹಿಂಪುರ್ ಪ್ರದೇಶದಲ್ಲಿ ಘಟನೆ ನಡೆದಿದೆ. ಹರಿತವಾದ ಆಯುಧಗಳನ್ನು ಹೊಂದಿದ್ದ ಕಳ್ಳಸಾಗಾಣಿಕೆದಾರರಿಂದ ಹೆಚ್ಚಿನ ಪ್ರಮಾಣದ ಶುಗರ್ ಮತ್ತು ಇತರ ನಿಷಿದ್ಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ವರದಿ ಮಾಡಿದ್ದಾರೆ.
“ಬಿಎಸ್ಎಫ್ನ ಜಾಗರೂಕ ಮಹಿಳಾ ಪ್ರಹಾರಿಗಳು ಭಾನುವಾರ ಬೆಳಗ್ಗೆ 6.45 ರ ಸುಮಾರಿಗೆ ಮಾದಕವಸ್ತು ಕಳ್ಳಸಾಗಾಣೆದಾರರ ಮೇಲೆ ಎರಡು ಸುತ್ತು ಗುಂಡು ಹಾರಿಸಿದರು, ಹರಿತ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾದ ಕಳ್ಳಸಾಗಣೆದಾರರು ಪ್ರತಿದಾಳಿ ನಡೆಸುವ ಯತ್ನವನ್ನೂ ನಡೆಸಿದ್ದರು. ಇದರು ಯೋಧೆಯರು ವಿಫಲಗೊಳಿಸಿದರು ಮತ್ತು ನಿಷಿದ್ಧ ವಸ್ತುಗಳನ್ನು ಅವರಿಂದ ವಶಪಡಿಸಿಕೊಂಡರು” ಎಂದು ಅಧಿಕಾರಿ ಹೇಳಿದ್ದಾರೆ.
ಈ ಮಹಿಳಾ ಸಿಬ್ಬಂದಿ ಡ್ರಿಲ್ಗಳು, ಆತ್ಮರಕ್ಷಣೆಯ ತಂತ್ರಗಳು ಮತ್ತು ಸ್ವಯಂಚಾಲಿತ ಮತ್ತು ಅರೆ-ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ಕಠಿಣ ತರಬೇತಿಯನ್ನು ಪಡೆದು ಕರ್ತವ್ಯದಲ್ಲಿ ತೊಡಗಿದ್ದಾರೆ.
ಬಾಂಗ್ಲಾದೇಶದಿಂದ ಬಂದಿರುವ ಅಪರಾಧಿಗಳು ಬಿಎಸ್ಎಫ್ ಮೇಲೆ ಆಗಾಗ ದಾಳಿಗಳನ್ನು ನಡೆಸುತ್ತಾ ಬರುತ್ತಿದ್ದಾರೆ ಮತ್ತು ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳುವ ಪ್ರಯತ್ನಗಳನ್ನು ನಡೆಸುತ್ತಾರೆ. ಇಂತವರನ್ನು ಎದರಿಸಲು ಬೇಕಾದ ತಂತ್ರಗಾರಿಕೆ ಬಿಎಸ್ಎಫ್ ಮಹಿಳೆಯರು ಪಡೆದಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.