ಪೋರ್ಟ್ ಬ್ಲೇರ್: ಐತಿಹಾಸಿಕ ಹೆಜ್ಜೆಯಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು ಜರಾವಾ ಸಮುದಾಯದ 19 ಸದಸ್ಯರಿಗೆ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಿದೆ. ಈ ಸಮುದಾಯವನ್ನು ಹಿಂದೆ ಹಿಂಸಾತ್ಮಕ ಮತ್ತು ನಿರ್ಲಕ್ಷ್ಯಿತರು ಎಂದು ಕರೆಯಲಾಗುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಚಂದ್ರ ಭೂಷಣ್ ಕುಮಾರ್ ಅವರು ದಕ್ಷಿಣ ಅಂಡಮಾನ್ ಜಿಲ್ಲೆಯ ಜಿರ್ಕಟಾಂಗ್ನಲ್ಲಿರುವ ವಸತಿ ಪ್ರದೇಶದಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಲ್ಲಿ ಒಂದಾದ ಜರಾವಾ ಬುಡಕಟ್ಟು ಸದಸ್ಯರಿಗೆ ಮತದಾರರ ಗುರುತಿನ ಚೀಟಿಗಳನ್ನು ಹಸ್ತಾಂತರಿಸಿದರು.
“ಜರಾವಾ ಸಮುದಾಯದ ವಿಶಿಷ್ಟ ಗುರುತನ್ನು ಎತ್ತಿಹಿಡಿಯಲು ಮತ್ತು ಅವರ ಗೌಪ್ಯತೆಯನ್ನು ಕಾಪಾಡಲು ನಾವು ಸಮಗ್ರ ಕ್ರಮವನ್ನು ಅಳವಡಿಸಿಕೊಂಡಿದ್ದೇವೆ” ಎಂದು ದಕ್ಷಿಣ ಅಂಡಮಾನ್ ಜಿಲ್ಲಾ ಚುನಾವಣಾ ಅಧಿಕಾರಿ ಅರ್ಜುನ್ ಶರ್ಮಾ ತಿಳಿಸಿದ್ದಾರೆ.
“ಇದು ಭಾರತದ ಪ್ರಜಾಸತ್ತಾತ್ಮಕ ವಿಕಾಸದಲ್ಲಿ ಒಂದು ಹೆಗ್ಗುರುತು ಸಾಧನೆಯಾಗಿದೆ, ಇದು ಎಲ್ಲಾ ನಾಗರಿಕರಿಗೆ ಒಳಗೊಳ್ಳುವಿಕೆ ಮತ್ತು ಸಮಾನತೆಯನ್ನು ಖಾತ್ರಿಪಡಿಸುವ ದೇಶದ ಬದ್ಧತೆಯನ್ನು ಸಂಕೇತಿಸುತ್ತದೆ. ಜರುವಾ ಜನರ ಒಳಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ನಡುವೆ ಎಚ್ಚರಿಕೆಯ ಸಮತೋಲನ ಕಾಪಾಡಲಾಗಿದೆ, ಪ್ರಕ್ರಿಯೆಯ ಯಾವುದೇ ಅಂಶವು ಜರಾವಾ ಜನರ ಘನತೆಗೆ ಧಕ್ಕೆಯಾಗದಂತೆ ನಾವು ಖಚಿತಪಡಿಸಿದ್ದೇವೆ” ಅವರು ಹೇಳಿದರು.
ಈ ಸಾಧನೆಯಲ್ಲಿ ಪ್ರಮುಖ ಪಾತ್ರವನ್ನು ಅಂಡಮಾನ್ ಆದಿಮ್ ಜನಜಾತಿ ವಿಕಾಸ ಸಮಿತಿ (ಎಎಜೆವಿಎಸ್) ವಹಿಸಿದೆ, ಇದು ಜರುವಾ ಸಮುದಾಯದಲ್ಲಿ ಸಾಂಸ್ಕೃತಿಕವಾಗಿ ಸೂಕ್ತವಾದ ಮತ್ತು ಗೌರವಯುತವಾಗಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.