ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ನವದೆಹಲಿಯಲ್ಲಿ 2025 ರ ಭಾರತ ಸರ್ಕಾರದ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿದರು. “ಜನಭಾಗಿದರಿ ಸೇ ಜನಕಲ್ಯಾಣ” ಥೀಮ್ ಅಡಿ ಕೇಂದ್ರ ಸರ್ಕಾರ ತನ್ನ 2025 ರ ಕ್ಯಾಲೆಂಡರ್ ಅನ್ನು ಹೊರತಂದಿದೆ. ಇದು ಕೇಂದ್ರದ ಪರಿವರ್ತಕ ಆಡಳಿತದ ನೀತಿಯನ್ನು ಒತ್ತಿಹೇಳುತ್ತದೆ.
ರೈಲ್ ಭವನದಲ್ಲಿ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿದ ವೈಷ್ಣವ್ ಅವರು, ಕಳೆದ ದಶಕದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಪರಿವರ್ತಕ ಆಡಳಿತದ ಪರಿಣಾಮವನ್ನು ಪುನರುಚ್ಛರಿಸಿದರು. ಬಡವರ ಕಲ್ಯಾಣ ಸುಧಾರಣೆ, ಮಹಿಳೆಯರ ಸಬಲೀಕರಣ ಮತ್ತು ರಾಷ್ಟ್ರದಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗೆ ಚಾಲನೆ ನೀಡುವಲ್ಲಿ ಪರಿವರ್ತಕ ಆಡಳಿತದ ಪಾತ್ರವನ್ನು ಅವರು ಒತ್ತಿ ಹೇಳಿದರು.
ಪ್ರತಿ ವರ್ಷ ಭಾರತ ಸರ್ಕಾರವು ಕ್ಯಾಲೆಂಟರ್ ಮೂಲಕ ರಾಷ್ಟ್ರದ ಪ್ರಗತಿ ಮತ್ತು ಪರಿವರ್ತಕ ಆಡಳಿತವನ್ನು ಹೈಲೈಟ್ ಮಾಡುತ್ತದೆ. ಇದು ದೀರ್ಘಕಾಲದ ಸಂಪ್ರದಾಯವಾಗಿ ಮುಂದುವರೆದುಕೊಂಡು ಬಂದಿದೆ. ಕ್ಯಾಲೆಂಟರ್ ಅನ್ನು ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ವಿನ್ಯಾಸಗೊಳಿಸಿದೆ ಮತ್ತು ತಯಾರಿಸಿದೆ.
ಪಾರದರ್ಶಕತೆ ಮತ್ತು ಸಹಭಾಗಿತ್ವದ ಆಡಳಿತಕ್ಕೆ ಸರ್ಕಾರದ ಬದ್ಧತೆಯನ್ನು ಕ್ಯಾಲೆಂಟರ್ ಪ್ರತಿಬಿಂಬಿಸಿಗಿದೆ. ಸ್ವಚ್ಛ ಭಾರತ್ ಮಿಷನ್ನಂತಹ ಕಾರ್ಯಕ್ರಮಗಳಿಂದ ಹಿಡಿದು ಆಯುಷ್ಮಾನ್ ಭಾರತ್ನಂತಹ ಉಪಕ್ರಮಗಳವರೆಗೆ, ಸರ್ಕಾರದ ಯೋಜನೆಗಳ ಯಶಸ್ಸಿಗೆ ನಾಗರಿಕರ ಭಾಗವಹಿಸುವಿಕೆ ಕೇಂದ್ರವಾಗಿದೆ ಎಂಬುದನ್ನು ಪುನರುಚ್ಛರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.