ನವದೆಹಲಿ: ಜಗತ್ತು 2025 ಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪತಿ ಮುರ್ಮು ಸೇರಿದಂತೆ ಅನೇಕರು ಹೊಸ ಕ್ಯಾಲೆಂಟರ್ ವರ್ಷದಲ್ಲಿ ದೇಶದೆಲ್ಲೆಡೆ ಸಮೃದ್ಧಿ ಕಾಣಲಿ ಎಂದು ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಎಕ್ಸ್ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಹೊಸ ಅವಕಾಶಗಳು, ವೈಯಕ್ತಿಕ ಬೆಳವಣಿಗೆ ಮತ್ತು ಸಾಮೂಹಿಕ ಯೋಗಕ್ಷೇಮದ ಮಹತ್ವವು ವರ್ಷದ ಮಾರ್ಗದರ್ಶಿ ತತ್ವಗಳಾಗಲಿ ಎಂದು ಒತ್ತಿಹೇಳಿದ್ದಾರೆ.
“2025 ರ ಶುಭಾಶಯಗಳು! ಈ ವರ್ಷ ಎಲ್ಲರಿಗೂ ಹೊಸ ಅವಕಾಶಗಳು, ಯಶಸ್ಸು ಮತ್ತು ಅಂತ್ಯವಿಲ್ಲದ ಸಂತೋಷವನ್ನು ತರಲಿ. ಪ್ರತಿಯೊಬ್ಬರೂ ಅದ್ಭುತವಾದ ಆರೋಗ್ಯ ಮತ್ತು ಸಮೃದ್ಧಿಯೊಂದಿಗೆ ಆಶೀರ್ವದಿಸಲಿ” ಎಂದಿದ್ದಾರೆ.
ರಾಷ್ಟ್ರಪತಿ ತಮ್ಮ ಸಂದೇಶದಲ್ಲಿ, ಹೊಸ ವರ್ಷವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಭರವಸೆಗಳು, ಕನಸುಗಳು ಮತ್ತು ಆಕಾಂಕ್ಷೆಗಳ ಆರಂಭವನ್ನು ಸೂಚಿಸುತ್ತದೆ. ಹೊಸ ವರ್ಷದ ಸಂದರ್ಭವು ಜನರು ತಮ್ಮ ಆಸೆಗಳನ್ನು ಪೂರೈಸಲು ನವ ಚೈತನ್ಯದಿಂದ ಮುನ್ನಡೆಯಲು ಅವಕಾಶ ನೀಡುತ್ತದೆ. ಹೊಸ ವರ್ಷವನ್ನು ಸಂತೋಷ ಮತ್ತು ಉತ್ಸಾಹದಿಂದ ಸ್ವಾಗತಿಸಲು ಮತ್ತು ಸಮಾಜ ಮತ್ತು ರಾಷ್ಟ್ರವನ್ನು ಏಕತೆ ಮತ್ತು ಶ್ರೇಷ್ಠತೆಯ ಹಾದಿಯಲ್ಲಿ ಕೊಂಡೊಯ್ಯುವಂತೆ ಜನರನ್ನು ಕೇಳಿಕೊಂಡರು.
Happy 2025!
May this year bring everyone new opportunities, success and endless joy. May everybody be blessed with wonderful health and prosperity.
— Narendra Modi (@narendramodi) January 1, 2025
Wishing everyone a very Happy New Year! May the year 2025 bring joy, harmony and prosperity to all! On this occasion, let us renew our commitment to work together for creating a brighter, more inclusive and sustainable future for India and the world.
— President of India (@rashtrapatibhvn) January 1, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.