ಮಂಗಳೂರು: ಪ್ರಪಂಚದಲ್ಲೇ ಕಾರ್ಗೋ ಹಡಗುಗಳ ನಿರ್ಮಾಣದಲ್ಲಿ 17ನೇ ಸ್ಥಾನದಲ್ಲಿದಲ್ಲಿರುವ ಭಾರತ ತನ್ನ ಆತ್ಮ ನಿರ್ಭರ ಭಾರತ ಮತ್ತು ಮೇಕ್ ಇಂಡಿಯಾ ಯೋಜನೆಗಳ ಮೂಲಕ 2030ರ ವೇಳೆಗೆ ಟಾಪ್ 10 ಆಗುವ ಗುರಿಯನ್ನು ಹೊಂದಿದೆ. ಈಗ ಇದಕ್ಕೆ ಪುಷ್ಠಿ ನೀಡುವಂತೆ ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ‘ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್’ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಹೌದು ಭಾರತದಿಂದ ನಾರ್ವೆ ದೇಶಕ್ಕೆ ಬೃಹತ್ ಹಡಗೊಂದು ರವಾನೆಗೆ ಸಿದ್ಧವಾಗಿದೆ.
‘ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್’ ಬಳಿ ನಾರ್ವೆ ದೇಶದ ವಿಲ್ಸನ್ ಎಎಸ್ ಕಂಪನಿಯು ಹಡಗುಗಳನ್ನು ನಿರ್ಮಿಸಿ ಪೂರೈಸುವಂತೆ ಮನವಿಯನ್ನ ಮಾಡಿಕೊಂಡಿತ್ತು. ಈ ಮನವಿಯಂತೆ ಒಟ್ಟು 14 ಹಡಗುಗಳನ್ನು ಪೂರೈಸುವ ಒಪ್ಪಂದವನ್ನು ನಾರ್ವೆಯೊಂದಿಗೆ ಮಾಡಲಾಗಿದ್ದು, ಭಾರತದ ಜೊತೆ ನಾರ್ವೆ ಸುಮಾರು 2000 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಮೊದಲ ಹಡಗು ಈಗ ಪೂರೈಕೆಗೆ ಅಣಿಯಾಗಿದೆ.
ಭಾರತದ ಕರಾವಳಿ ಕರ್ನಾಟಕದ ಹೆಮ್ಮೆಯ “ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್” ನಿರ್ಮಾಣ ಮಾಡಿದ ಮೊದಲ ಹಡಗು ಪಾಶ್ಚಿಮಾತ್ಯ ದೇಶದ ಕಡೆ ಮುಖ ಮಾಡಿದೆ. ನಾರ್ವೆ ದೇಶಕ್ಕೆ 3800 TDW ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆಯ ವಿಲ್ಸನ್ ಎಎಸ್ ಕಂಪನಿಯ ಸಿಬ್ಬಂದಿಗಳು ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್ಗೆ ಬಂದು ಖರೀದಿ ಪ್ರಕ್ರಿಯೆಯನ್ನು ಪೂರೈಸಿದರು. ಒಪ್ಪಂದಕ್ಕೆ ಸಹಿ ಹಾಕಿದರು. ವಿಭಿನ್ನ ಶೈಲಿಯಲ್ಲಿ ತಯಾರಿಸಲಾಗಿರುವ ಈ ಹಡಗು, 02_89.43 ಉದ್ದ, 13.2 ಮೀಟರ್ ಅಗಲದ ಹಡಗು 4.2 ಮೀಟರ್ ಡ್ರಾಫ್ಟ್ ಹೊಂದಿದೆ. ಸರಕು ಸಾಗಾಣಿಕೆ ಮಾಡುವ ಪರಿಸರ ಸ್ನೇಹಿ ಹಡಗು ಇದಾಗಿದ್ದು, ಉಡುಪಿಯಿಂದ ಮೊದಲ ಬಾರಿಗೆ ನಾರ್ವೆಗೆ ಪೂರೈಕೆ ಮಾಡಲಾಗುತ್ತಿದೆ.
ಇನ್ನು ಪೂರೈಕೆ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ಭಾರತೀಯ ಸಂಸ್ಕೃತಿಯಂತೆ ಹಡಗಿಗೆ ತೆಂಗಿನಕಾಯಿ ಒಡೆದು, ಹೂವಿನ ಮಾಲೆ ಅರ್ಪಿಸಿ, ಅರಶಿನ ಕುಂಕುಮ ಹಚ್ಚಿ, ಆರತಿ ಬೆಳಗುವುದರೊಂದಿಗೆ ಪೂಜೆ ನೆರವೇರಿಸಲಾಯಿತು. ತಂತ್ರಜ್ಞಾನಗಳು ಎಷ್ಟೇ ಅಭಿವೃದ್ಧಿಯಾದರೂ, ಜಗತ್ತು ಎಷ್ಟೇ ಬದಲಾದರು ಪರಂಪರೆಯಿಂದ ಬೇರೂರಿರುವ ಭಾರತೀಯ ಸಂಸ್ಕೃತಿ ಮಾತ್ರ ಇಂದಿಗೂ ಹಾಗೇ ಇದೆ. ಅದನ್ನೂ ಇಂದಿಗೂ ನಮ್ಮ ವಿಜ್ಞಾನಿಗಳು ಪಾಲಿಸುತ್ತಿರುವುದರ ಖುಷಿ ಒಂದೆಡೆಯಾದರೆ, ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ಆತ್ಮ ನಿರ್ಭರ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆ ನನಸಾಗಿರುವುದು ಖುಷಿಯ ದುಪ್ಪಟ್ಟಿಗೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೆ ಈ ಬೃಹತ್ ನೌಕೆ ನಿರ್ಮಾಣದಲ್ಲಿ ಈಗಾಗಲೇ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಭಾಗದ 1000ಕ್ಕೂ ಹೆಚ್ಚು ಜನರು ಈಗಾಗಲೇ ಉದ್ಯೋಗವಕಾಶವನ್ನೂ ಪಡೆದಿದ್ದಾರೆ. ಭಾರತದ ಇಂತಹ ಸಾಧನೆ ಇನ್ನಷ್ಟು ಹೆಚ್ಚಾಗಲಿ, ಪ್ರತಿಯೊಂದರಲ್ಲೂ ವಿಶ್ವದ ನಂಬರ್ 1 ದೇಶ ಭಾರತವಾಗಿರಲಿ ಎಂಬುದೇ ನಮ್ಮ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.