ನವದೆಹಲಿ: ಇತ್ತೀಚೆಗೆ ಅಟಲ್ ಪಿಂಚಣಿ ಯೋಜನೆ (APY)ಯು ಮಹತ್ವದ ಮೈಲಿಗಲ್ಲು ಸಾಧಿಸಿದೆ, ಡಿಸೆಂಬರ್ 2, 2024 ರಂತೆ 7.15 ಕೋಟಿ ಚಂದಾದಾರರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.
ಕಾರ್ಯಕ್ರಮದ ಯಶಸ್ಸನ್ನು ಘೋಷಿಸಿದ ಹಣಕಾಸು ಸಚಿವಾಲಯವು X ನಲ್ಲಿ ಪೋಸ್ಟ್ ಮಾಡಿದೆ, “ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಏಳು ಕೋಟಿಗೂ ಹೆಚ್ಚು ಚಂದಾದಾರರು ಇದ್ದು, ಖಾತರಿಪಡಿಸಿದ ಪಿಂಚಣಿ ಪ್ರಯೋಜನಗಳ ಜೊತೆಗೆ ಸುರಕ್ಷಿತ ನಿವೃತ್ತಿಯನ್ನು ಇದು ನೀಡುತ್ತದೆ, ಇದು ಫಲಾನುಭವಿಗಳಿಗೆ ನಿವೃತ್ತಿಯ ನಂತರ ಮಾನಸಿಕ ಶಾಂತಿಯನ್ನು ಖಾತ್ರಿಪಡಿಸುತ್ತದೆ” ಎಂದಿದೆ.
ನಿವೃತ್ತಿಯ ನಂತರದ ವರ್ಷಗಳಲ್ಲಿ ಭಾರತದ ದುಡಿಯುವ ಜನಸಂಖ್ಯೆಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ, ಪಿಂಚಣಿ ಯೋಜನೆ ಚಂದಾದಾರರು ನೀಡಿದ ಕೊಡುಗೆಗಳ ಆಧಾರದ ಮೇಲೆ 60 ವರ್ಷ ಮೇಲ್ಪಟ್ಟವರಿಗೆ ರೂ 1,000 ರಿಂದ ರೂ 5,000 ರವರೆಗಿನ ಕನಿಷ್ಠ ಮಾಸಿಕ ಪಿಂಚಣಿಯನ್ನು ಈ ಯೋಜನೆ ಖಾತರಿಪಡಿಸುತ್ತದೆ.
ಈ ಯೋಜನೆಯು ಮಹಿಳೆಯರಿಂದ ಗಮನಾರ್ಹ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ, ಅವರು ಒಟ್ಟು ಚಂದಾದಾರರಲ್ಲಿ ಶೇಕಡಾ 47 ರಷ್ಟು ಪಾಲು ಹೊಂದಿದ್ದಾರೆ.
With more than seven crore subscribers under Atal Pension Yojana #APY, offers secure retirement with guaranteed #PensionBenefits, ensuring peace of mind after retirement for its beneficiaries.
⁰#FinMinYearReview2024⁰#BankingInitiatives⁰#ViksitBharat pic.twitter.com/0ApQA2iZ2R— Ministry of Finance (@FinMinIndia) December 14, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.