
ಮನಾಮ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬಹ್ರೇನ್ ಪ್ರವಾಸದಲ್ಲಿದ್ದು, ಭಾನುವಾರ ಅಲ್ಲಿನ ಮನಾಮಾದಲ್ಲಿರುಬವ ಶ್ರೀನಾಥ್ ಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು, ಈ ದೇಗುಲ ಭಾರತ ಮತ್ತು ಬಹ್ರೇನ್ ನಡುವಿನ “ದೀರ್ಘಕಾಲದ ಸ್ನೇಹದ ನಿಜವಾದ ಸಂಕೇತ” ಎಂದು ಬಣ್ಣಿಸಿದ್ದಾರೆ.
ಎಕ್ಸ್ ಪೋಸ್ಟ್ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡ ಎಸ್ ಜೈಶಂಕರ್, “ಮನಾಮಾದ 200 ವರ್ಷಗಳಷ್ಟು ಹಳೆಯದಾದ ಶ್ರೀನಾಥ್ಜಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ದಿನವನ್ನು ಪ್ರಾರಂಭಿಸಿದೆ. ದೀರ್ಘಕಾಲದ ಭಾರತ – ಬಹ್ರೇನ್ ಸ್ನೇಹದ ನಿಜವಾದ ಸಂಕೇತ” ಎಂದು ಬರೆದಿದ್ದಾರೆ.
ಮನಾಮ ಸಂವಾದದಲ್ಲಿ ಭಾಗವಹಿಸಲು ಇಎಎಂ ಜೈಶಂಕರ್ ಅವರು ಶನಿವಾರ ಮನಾಮಕ್ಕೆ ಆಗಮಿಸಿದ್ದಾರೆ. ಅವರನ್ನು ಬಹ್ರೇನ್ನ ವಿದೇಶಾಂಗ ಸಚಿವ ಅಬ್ದುಲ್ಲತೀಫ್ ಬಿನ್ ರಶೀದ್ ಅಲ್ ಜಯಾನಿ ಅವರು ಬರಮಾಡಿಕೊಂಡರು.
ಅವರು ಇಂದು ಮನಾಮ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಉನ್ನತ ಜಂಟಿ ಆಯೋಗದ ಸಭೆ ನಡೆಸಲಿದ್ದಾರೆ.
ಅವರು ಡಿಸೆಂಬರ್ 8 ರಿಂದ 9 ರವರೆಗೆ ಬಹ್ರೇನ್ನಲ್ಲಿರುತ್ತಾರೆ, ಅಲ್ಲಿ ಅವರು ಬಹ್ರೇನ್ನ ವಿದೇಶಾಂಗ ಸಚಿವ ಅಬ್ದುಲ್ಲತೀಫ್ ಬಿನ್ ರಶೀದ್ ಅಲ್ ಜಯಾನಿ ಅವರೊಂದಿಗೆ 4 ನೇ ಭಾರತ-ಬಹ್ರೇನ್ ಉನ್ನತ ಜಂಟಿ ಆಯೋಗದ (HJC) ಸಹ-ಅಧ್ಯಕ್ಷರಾಗಿರುತ್ತಾರೆ. ಈ ಸಚಿವರ ಸಭೆಯು ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸುತ್ತದೆ ಮತ್ತು ಭಾರತ ಮತ್ತು ಬಹ್ರೇನ್ ನಡುವಿನ ಬಹುಮುಖಿ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಚರ್ಚಿಸುತ್ತದೆ.
Started the day by visiting the 200 year-old Shreenathji Temple in Manama.
A true symbol of the longstanding India – Bahrain friendship.
🇮🇳 🇧🇭 pic.twitter.com/N2M6Z44CcA
— Dr. S. Jaishankar (@DrSJaishankar) December 8, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


