ರಿಯೊ ಡಿ ಜನೈರೊ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರಬ್ರೆಜಿಲ್ನಲ್ಲಿ ರಾಮಾಯಣದ ಪ್ರಸ್ತುತಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಕ್ಸ್ ಪೋಸ್ಟ್ ಮಾಡಿರುವ ಮೋದಿ, “ಜೋನಸ್ ಮಾಸೆಟ್ಟಿ ಮತ್ತು ಅವರ ತಂಡವನ್ನು ಭೇಟಿಯಾದೆ. ವೇದಾಂತ ಮತ್ತು ಗೀತೆಯ ಬಗೆಗಿನ ಅವರ ಉತ್ಸಾಹ ಆಸಕ್ತಿಯನ್ನು ನಾನು ಮನ್ಕಿಬಾತ್ ಕಾರ್ಯಕ್ರಮವೊಂದರಲ್ಲೂ ಉಲ್ಲೇಖಿಸಿದ್ದೆ” ಎಂದು ಹೇಳಿದ್ದಾರೆ.
“ಅವರ ತಂಡವು ಸಂಸ್ಕೃತದಲ್ಲಿ ರಾಮಾಯಣದ ನೋಟಗಳನ್ನು ಪ್ರಸ್ತುತಪಡಿಸಿದೆ. ಭಾರತೀಯ ಸಂಸ್ಕೃತಿಯು ಪ್ರಪಂಚದಾದ್ಯಂತ ಹೇಗೆ ಪ್ರಭಾವ ಬೀರುತ್ತಿದೆ ಎಂಬುದು ಶ್ಲಾಘನೀಯ” ಎಂದು ಹೇಳಿದರು.
ವೇದಾಂತ ಮತ್ತು ಸಂಸ್ಕೃತವನ್ನು ಪ್ರಚಾರ ಮಾಡಲು ಮೀಸಲಾಗಿರುವ ಬ್ರೆಜಿಲಿಯನ್ ಸಂಸ್ಥೆಯಾದ ವಿಶ್ವ ವಿದ್ಯಾ ಗುರುಕುಲಂನ ವಿದ್ಯಾರ್ಥಿಗಳು ರಾಮಾಯಣವನ್ನು ಮೋದಿ ಮುಂದೆ ಪ್ರದರ್ಶಿಸಿದರು.
ವಿಶ್ವ ವಿದ್ಯಾ ಗುರುಕುಲಂನ ಸಂಸ್ಥಾಪಕರಾದ ಆಚಾರ್ಯ ವಿಶ್ವನಾಥ್ ಎಂದೂ ಕರೆಯಲ್ಪಡುವ ಜೋನಾಸ್ ಮಾಸೆಟ್ಟಿ ಅವರು ‘ಸಂಸ್ಕೃತ ಮಂತ್ರ’ ಪಠಿಸುವ ಮೂಲಕ ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು.
ಈ ಬಗ್ಗೆ ಮಾತನಾಡಿದ ಮಾಸೆಟ್ಟಿ, “ರಾಮಾಯಣವು ಧರ್ಮಕ್ಕೆ ಗೌರವವಾಗಿದೆ. ರಾಮನು ಧರ್ಮವನ್ನು ಪ್ರತಿನಿಧಿಸುತ್ತಾನೆ ಮತ್ತು ರಾಮಾಯಣವನ್ನು ನಿರ್ವಹಿಸುತ್ತಾನೆ ಮತ್ತು ರಾಮ್ ಕಥಾದೊಂದಿಗೆ ಸಂಪರ್ಕದಲ್ಲಿರುವುದು ನಮ್ಮನ್ನು ಶುದ್ಧೀಕರಿಸುವ ಮತ್ತು ಉತ್ತಮ ಜೀವನ ವಿಧಾನವನ್ನು ಹೊಂದುವ ಒಂದು ಮಾರ್ಗವಾಗಿದೆ. ಈ ಪ್ರಸ್ತುತಿ ಸಿದ್ಧತೆವಾಗಲು ಆರು ವರ್ಷಗಳಷ್ಟು ಸಮಯ ತೆಗೆದುಕೊಂಡಿತು. ಆರಂಭದಲ್ಲಿ ಭಯವಿತ್ತು, ಈಗ ನಾವು ತುಂಬಾ ಭಾವುಕರಾಗಿದ್ದೆವು ಏಕೆಂದರೆ ಅವು ನಮಗೆ ಬಹಳಷ್ಟು ಅರ್ಥವಾಗಿದೆ”ಎಂದಿದ್ದಾರೆ.
ನಮ್ಮ ಕಾರ್ಯವೈಖರಿಯಿಂದ ಪ್ರಧಾನಿ ಮೋದಿಯವರು ತುಂಬಾ ಪ್ರಭಾವಿತರಾಗಿದ್ದಾರೆ ಎಂದು ಮಾಸೆಟ್ಟಿ ಹೇಳಿದರು. ಭಾರತೀಯ ಯುವಜನರನ್ನು ಭಾರತೀಯ ಜೀವನ ವಿಧಾನವನ್ನು ನಂಬುವಂತೆ ಪ್ರೋತ್ಸಾಹಿಸಿದರು.
“ಮೋದಿಯನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಭಾರತದಲ್ಲಿ ಯುವಕರು ವೈದಿಕ ಸಂಪ್ರದಾಯ ಮತ್ತು ಎಲ್ಲಾ ಹಳೆಯ ವಿಧಾನಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ ಎಂದು ನಾನು ಕೇಳಿದಾಗ ನನಗೆ ತುಂಬಾ ದುಃಖವಾಗುತ್ತದೆ. ಭಾರತೀಯರು ಬಹಳ ಒಳ್ಳೆಯ ಸಂಸ್ಕೃತಿಯನ್ನು ಹೊಂದಿದ್ದಾರೆ” ಎಂದು ಅವರು ಹೇಳಿದ್ದಾರೆ.
Met Jonas Masetti and his team. I had mentioned him during one of the #MannKiBaat programmes for his passion towards Vedanta and the Gita. His team presented glimpses of the Ramayan in Sanskrit. It is commendable how Indian culture is making an impact all over the world. pic.twitter.com/4Voy0OKt9X
— Narendra Modi (@narendramodi) November 20, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.