ನವದೆಹಲಿ: ಕೇಂದ್ರ ಸರಕಾರದ ಬಹುಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್ ವಿಮೆ ಯೋಜನೆಯನ್ನು ಇತ್ತೀಚಿಗಷ್ಟೇ ಕೇಂದ್ರ ಸರಕಾರ ದೇಶದ ಎಲ್ಲಾ ಹಿರಿಯ ನಾಗರಿಕರಿಗೂ ವಿಸ್ತರಿಸಿದೆ. ಯೋಜನೆ ವಿಸ್ತರಿಸಿದ ಒಂದೇ ವಾರದಲ್ಲಿ ಸುಮಾರು 2.16 ಲಕ್ಷ ಹೊಸ ಫಲಾನುಭವಿಗಳು ಈ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಕರ್ನಾಟಕದಿಂದ ಸುಮಾರು 11,613 ಮಂದಿ ಸೇರ್ಪಡೆಯಾಗಿದ್ದಾರೆ. ಹಾಗಾಗಿ ಯೋಜನೆಗೆ ಅತೀ ಹೆಚ್ಚು ನೋಂದಣಿ ಆಗಿರುವ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನ ಪಡೆದಿದೆ. ಹೊಸ ಫಲಾನುಭವಿಗಳಲ್ಲಿ ಅತೀ ಹೆಚ್ಚು ಕೇರಳರಾಜ್ಯದವರಾಗಿದ್ದು, 89,800 ಮಂದಿಗೆ ಕಾರ್ಡ್ ವಿತರಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಹೇಳಿದೆ. 2 ಮತ್ತು 3ನೇ ಸ್ಥಾನವನ್ನು ಕ್ರಮವಾಗಿ ಮಧ್ಯಪ್ರದೇಶ (53,000) ಮತ್ತು ಉತ್ತರ ಪ್ರದೇಶ (47,000) ಪಡೆದುಕೊಂಡಿವೆ.
ತಮಿಳುನಾಡು (3156), ತೆಲಂಗಾಣ (3056) ಮತ್ತು ಆಂಧ್ರಪ್ರದೇಶ (3488) ಮಂದಿ ನೋಂದಣಿ ಮಾಡಿಕೊಂಡಿದ್ದು, ಈ ರಾಜ್ಯಗಳಲ್ಲಿ ನೋಂದಣಿ ಪ್ರಮಾಣ ಕಡಿಮೆ ಇದೆ ಎಂದು ದತ್ತಾಂಶಗಳಿಂದ ತಿಳಿದುಬಂದಿದೆ.
ಆದಾಯದ ಮಾನದಂಡದಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದ 70 ವರ್ಷ ದಾಟಿರುವ ಸುಮಾರು 32 ಸಾವಿರ ಮಂದಿ, ಆದಾಯದ ಮಿತಿ ಇಲ್ಲದ ವಿಸ್ತರಿತ ಯೋಜನೆಗೆ (5 ಲಕ್ಷ ರೂ.) ಹೆಚ್ಚುವರಿ ಫಲಾನುಭವಿಗಳಾಗಿ ಸೇರ್ಪಡೆಗೊಂಡಿದ್ದಾರೆ. ಹೊಸ ಯೋಜನೆಯ ಮೂಲಕ 4.5 ಕೋಟಿ ಕುಟುಂಬಕ್ಕೆ ಸಹಾಯವಾಗಲಿದ್ದು, 6 ಕೋಟಿ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.