ನವದೆಹಲಿ: ಹಿಂದೂ ಸಿಖ್ ಗ್ಲೋಬಲ್ ಫೋರಂನ ಸದಸ್ಯರು ದೆಹಲಿಯ ಚಾಣಕ್ಯಪುರಿಯಲ್ಲಿರುವ ಕೆನಡಾದ ಹೈಕಮಿಷನ್ ಹೊರಗೆ ಬೃಹತ್ ಪ್ರತಿಭಟನೆಯನ್ನು ನಡೆಸಿ ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ವಿರೋಧಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದರು ಮತ್ತು ಪ್ರತಿಭಟನಾಕಾರರನ್ನು ತಡೆದರು.
ಹಿಂದೂ ಮತ್ತು ಸಿಖ್ ಸಮುದಾಯಗಳ ಒಕ್ಕೂಟವನ್ನು ಪ್ರತಿನಿಧಿಸುವ ಹಿಂದೂ ಸಿಖ್ ಗ್ಲೋಬಲ್ ಫೋರಮ್, ಕೆನಡಾದಲ್ಲಿ ನಡೆದ ಹಿಂದು ವಿರೋಧಿ ಕೃತ್ಯಹಳ ವಿರುದ್ಧ ಸಾಮೂಹಿಕ ಅಸಮ್ಮತಿಯನ್ನು ಪ್ರದರ್ಶಿಸಿತು ಮತ್ತು ಅಂತಹ ದಾಳಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೆರವಣಿಗೆಯನ್ನು ಆಯೋಜಿಸಿದೆ.
ಹಿಂದೂ ಸಿಖ್ ಗ್ಲೋಬಲ್ ಫೋರಂನ ಅಧ್ಯಕ್ಷರಾದ ತರ್ವಿಂದರ್ ಸಿಂಗ್ ಮರ್ವಾ ಈ ವೇಳೆ ಮಾತನಾಡಿ, ಹಿಂದೂ ಮತ್ತು ಸಿಖ್ ಸಮುದಾಯಗಳನ್ನು ಗುರಿಯಾಗಿಸುವ ಘಟನೆಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದರು.
“ಉಗ್ರವಾದದ ಸಮಯದಲ್ಲಿ ಇಡೀ ಪೀಳಿಗೆಯನ್ನು ಖಲಿಸ್ಥಾನಿಗಳು ನಾಶಪಡಿಸಿದರು. ನಮ್ಮವರು ಕೊಲ್ಲಲ್ಪಟ್ಟರು ಅಥವಾ ಇತರ ದೇಶಗಳಿಗೆ ವಲಸೆ ಹೋದರು. ನಂತರ ಅವರು ನಮ್ಮ ಯುವ ಪೀಳಿಗೆಯ ಜೀವನವನ್ನು ಹಾಳುಮಾಡಲು ಮಾದಕವಸ್ತುಗಳನ್ನು ಪರಿಚಯಿಸಿದರು” ಎಂದು ಮಾರ್ವಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಲ್ಲದೇ ಬಲವಂತದ ಧಾರ್ಮಿಕ ಮತಾಂತರದ ಪ್ರಯತ್ನಗಳನ್ನು ನಡೆಸಿ ಸಮುದಾಯದ ಏಕತೆಯನ್ನು ಅಡ್ಡಿಪಡಿಸಲು ಪ್ರಯತ್ನಗಳನ್ನು ಕೂಡ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
“ಈಗ ದೇವಸ್ಥಾನಗಳ ಮೇಲೆ ದಾಳಿ ಮಾಡುವ ಹೊಸ ಕೃತ್ಯ ಪ್ರಾರಂಭವಾಗಿದೆ. ಇದು ತಪ್ಪು ಮತ್ತು ದುರದೃಷ್ಟಕರ” ಎಂದು ಅವರು ಹೇಳಿದರು.
ಮರ್ವಾ ಅವರು ಭಾರತದ ಸಿಖ್ ಸಮುದಾಯದ ಒಗ್ಗಟ್ಟನ್ನು ಪ್ರತಿಪಾದಿಸಿದ್ದಾರೆ ಮತ್ತು ಪ್ರತ್ಯೇಕತಾವಾದಿ ಸಿದ್ಧಾಂತಗಳನ್ನು ಬಲವಾಗಿ ತಿರಸ್ಕರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.