ನವದೆಹಲಿ: ನವೆಂಬರ್ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಪೂರ್ವ ತಯಾರಿ ಆರಂಭಿಸಿದೆ. ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂಬೈನಲ್ಲಿ 25 ಅಂಶಗಳ ‘ಸಂಕಲ್ಪ ಪತ್ರ 2024’ ಅನ್ನು ಅನಾವರಣಗೊಳಿಸಿದ್ದಾರೆ.
ಈ ಸಂಕಲ್ಪ ಪತ್ರದಲ್ಲಿ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ತರಬೇತಿಗಾಗಿ ಕೌಶಲ್ಯ ಗಣತಿ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಉಚಿತ ಪಡಿತರದ ಭರವಸೆಯನ್ನು ಬಿಜೆಪಿ ನೀಡಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಕಠಿಣ ನಿಬಂಧನೆಗಳೊಂದಿಗೆ ಬಲವಂತದ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರುವುದಾಗಿಯೂ ಬಿಜೆಪಿ ಆಶ್ವಾಸನೆ ನೀಡಿದೆ. ಇನ್ನು ಮಹಿಳೆಯರ ಸಬಲೀಕರಣಕ್ಕೆ ಪಣತೊಟ್ಟಿರುವ ಬಿಜೆಪಿ ಮಹಿಳೆಯರಿಗೆ ಮಹಾಯುತಿ ಸರ್ಕಾರದ ಲಾಡ್ಲಿ ಬಹಿನ್ ಯೋಜನೆಯಲ್ಲಿ ಆರ್ಥಿಕ ನೆರವನ್ನು ತಿಂಗಳಿಗೆ 1,500 ರೂ.ಗಳಿಂದ 2,100 ರೂ.ಗೆ ಹೆಚ್ಚಿಸಲಾಗುವುದು ಎಂದಿದೆ.
ಇನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 25 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಎಂಬ ಭರವಸೆಯನ್ನು ನೀಡುವುದರ ಜೊತೆಗೆ ಪ್ರತೀ ತಿಂಗಳು 10000 ರೂ ಗಳ ಸ್ಟೈಫಂಡ್ ಗಳಂತೆ 10 ಲಕ್ಷ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ತಿಳಿಸಿದೆ. ಆಡಳಿತಾರೂಢ ಮಹಾಯುತಿಯಲ್ಲಿ ಬಿಜೆಪಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಸೇರಿವೆ.
ಭವಂತರ್ ಯೋಜನೆ ಜೊತೆಗೆ ರೈತರ ಸಾಲ ಮನ್ನಾವನ್ನು ಬಿಜೆಪಿ ಘೋಷಿಸಿದೆ. ಬಡವರಿಗೆ ಆಹಾರ ಮತ್ತು ವಸತಿ ಒದಗಿಸುವ ಭರವಸೆ ನೀಡಿದೆ. ಹಿರಿಯ ನಾಗರಿಕರ ಪಿಂಚಣಿಯನ್ನು ತಿಂಗಳಿಗೆ 2,100 ರೂ.ಗೆ ಹೆಚ್ಚಳ ಮಾಡುವ ಘೋಷಣೆ ಮಾಡಿದೆ. ಅಗತ್ಯ ವಸ್ತುಗಳ ಬೆಲೆಗಳ ನಿಯಂತ್ರಣ ಮಾಡುವ ಭರವಸೆ ನೀಡಿದೆ. 25 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ ಮಾಡುವ ಘೋಷಣೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.