ನವದೆಹಲಿ: ಅಮೆರಿಕಾ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯ ಸಾಧಿಸುವಲ್ಲಿ ಮಹತ್ವಪೂರ್ಣ ಪಾತ್ರ ನಿಭಾಯಿಸಲಿರುವ ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರು ಅಕ್ಟೋಬರ್ 2025 ರ ವೇಳೆಗೆ ನಡೆಯಲಿರುವ ಕೆನಡಾದ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸರ್ಕಾರ ಪತನವಾಗುವ ಮುನ್ಸೂಚನೆ ನೀಡಿದ್ದಾರೆ.
ಟ್ರುಡೊವನ್ನು ಕೆಳಗಿಳಿಸಲು ಕೆನಡಾಗೆ ಸಹಾಯ ಮಾಡುವಂತೆ ಎಕ್ಸ್ ಬಳಕೆದಾರರೊಬ್ಬರ ವಿನಂತಿಗೆ ಪ್ರತಿಕ್ರಿಯಿಸಿರುವ ಮಸ್ಕ್, “ಮುಂಬರುವ ಚುನಾವಣೆಯಲ್ಲಿ ಅವರು ಹೋಗುತ್ತಾರೆ” ಎಂದು ಪೋಸ್ಟ್ ಮಾಡಿದ್ದಾರೆ.
“ಜರ್ಮನ್ ಸಮಾಜವಾದಿ ಸರ್ಕಾರವು ಕುಸಿದಿದೆ ಮತ್ತು ಈಗ ಕ್ಷಿಪ್ರ ಚುನಾವಣೆಯ ಬಗ್ಗೆ ಮಾತುಕತೆ ನಡೆಯುತ್ತಿದೆ” ಎಂದು ಸ್ವೀಡಿಷ್ ಪತ್ರಕರ್ತರೊಬ್ಬರು ಜರ್ಮನ್ ಸರ್ಕಾರದ ಬಗ್ಗೆ ಅಪ್ಡೇಟ್ ನೀಡಿ ಮಾಡಿದ ಪೋಸ್ಟ್ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಸಂವಹನ ಪ್ರಾರಂಭವಾಯಿತು. ಪ್ರತಿಕ್ರಿಯೆಯಾಗಿ, ಟೆಸ್ಲಾ ಮತ್ತು ಸ್ಪೇಸ್ಎಕ್ಸ್ನ ಸಿಇಒ ಮಸ್ಕ್ ಅವರು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು “ಮೂರ್ಖ” ಎಂದು ಟೀಕಿಸಿದ್ದಾರೆ.
ಇದಕ್ಕೆ, ಒಬ್ಬ ಬಳಕೆದಾನು, “ಟ್ರುಡೊವನ್ನು ಕೆಳಗಿಳಿಸಲು ಕೆನಡಾದಲ್ಲಿ ನಮಗೆ ನಿಮ್ಮ ಸಹಾಯದ ಅಗತ್ಯವಿದೆ ಎಲೋನ್ ಮಸ್ಕ್” ಎಂದು ಹೇಳಿದರು. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಅವರು ಕೆಳಗಿಳಿಯುತ್ತಾರೆ ಎಂದಿದ್ದಾರೆ.
ಮಸ್ಕ್ ಅವರು ಟ್ರುಡೊ ವಿರುದ್ಧ ವಾಗ್ದಾಳಿ ನಡೆಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ, ಅವರು ಕೆನಡಾದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಟ್ರುಡೊ ಸರ್ಕಾರವನ್ನು ಟೀಕಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.