ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆಯ ಅವಧಿಯಲ್ಲಿ ರಷ್ಯಾದ ತೈಲವನ್ನು ಖರೀದಿಸುವ ಭಾರತದ ನಿರ್ಧಾರವು ಅಂತರಾಷ್ಟ್ರೀಯ ತೈಲ ಬೆಲೆಗಳ ಏರಿಕೆಯನ್ನು ತಡೆಗಟ್ಟಿತು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಗುರುವಾರ ಅಬುಧಾಬಿ ಅಂತಾರಾಷ್ಟ್ರೀಯ ಪೆಟ್ರೋಲಿಯಂ ಪ್ರದರ್ಶನ ಮತ್ತು ಸಮ್ಮೇಳನದಲ್ಲಿ (ADIPEC) ಮಾತನಾಡಿದ ಪುರಿ, “ಭಾರತ ಸರ್ಕಾರವು ರಷ್ಯಾದ ತೈಲವನ್ನು ಖರೀದಿಸದೇ ಇದ್ದಿದ್ದರೆ, ಜಾಗತಿಕ ತೈಲ ಬೆಲೆ ಎಲ್ಲರಿಗೂ $ 200 ಕ್ಕೆ ಏರುತ್ತಿತ್ತು” ಎಂದಿದ್ದಾರೆ.
“2026 ರ ವೇಳೆಗೆ, ಮಾರುಕಟ್ಟೆಯಲ್ಲಿ ಹೆಚ್ಚಿನ ಶಕ್ತಿಯು ಲಭ್ಯವಿಲ್ಲದೇ ಹೋದರೆ ಪರಿಸ್ಥಿತಿಯನ್ವಯ ಬೆಲೆಗಳು ಸ್ಥಿರವಾಗಿ ಉಳಿಯುವ ಮತ್ತು ಇಳಿಯುವ ಸಾಧ್ಯತೆ ಹೆಚ್ಚು ಎಂದು ನಾನು ಭಾವಿಸುತ್ತೇನೆ” ಎಂದು ಪುರಿ ಹೇಳಿದ್ದಾರೆ.
ಅಕ್ಟೋಬರ್ನಲ್ಲಿ ರಷ್ಯಾದ ತೈಲ ಆಮದುಗಳನ್ನು ಸರಿಸುಮಾರು 10% ರಷ್ಟು ಕಡಿಮೆ ಮಾಡುವ ಭಾರತದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಪುರಿ, ಈ ಬದಲಾವಣೆಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗಳ ಪರಿಣಾಮವಾಗಿದೆ ಎಂದು ಹೇಳಿದರು. “ಇತರ ಪೂರೈಕೆದಾರರು ಸ್ಪರ್ಧಾತ್ಮಕ ದರಗಳನ್ನು ನೀಡುತ್ತಾರೆ ಮತ್ತು OPEC ಸ್ಥಾನವು ಬೆಲೆ ಮಾತುಕತೆಗಳನ್ನು ಒಳಗೊಂಡಿರುವುದಿಲ್ಲ. ಆರೋಗ್ಯಕರ ಸ್ಪರ್ಧೆ ನಡೆಯುತ್ತಿದೆ ಮತ್ತು ಒಂದು ಮೂಲ ಲಭ್ಯವಿಲ್ಲದಿದ್ದರೆ, ಯಾವಾಗಲೂ ಪರ್ಯಾಯಗಳು ಇದ್ದೇ ಇರುತ್ತವೆ” ಎಂದು ಅವರು ಹೇಳಿದರು.
ರಷ್ಯಾದ ತೈಲ ಆಮದು ಕಡಿತವು ಕಾರ್ಯತಂತ್ರದ ನಿರ್ಧಾರವೇ ಎಂದು ಪ್ರಶ್ನಿಸಿದಾಗ, “ಫೆಬ್ರವರಿ 22 ರಲ್ಲಿ 13 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವು ಇದ್ದಕ್ಕಿದ್ದಂತೆ ಲಭ್ಯವಿತ್ತು. ಒಂದು ವೇಳೆ ಭಾರತವು ಅದರ ಖರೀದಿಯನ್ನು ನಿಲ್ಲಿಸಿ ತನ್ನ 5 ಮಿಲಿಯನ್ ಬ್ಯಾರೆಲ್ಗಳನ್ನು ಗಲ್ಫ್ ಪೂರೈಕೆದಾರರಿಗೆ ವರ್ಗಾಯಿಸಿದ್ದರೆ, ಜಾಗತಿಕ ತೈಲ ಬೆಲೆಗಳು ಪ್ರತಿ ಬ್ಯಾರೆಲ್ಗೆ $ 200 ಕ್ಕೆ ಏರುತ್ತಿತ್ತು. ಹೀಗಾಗಿ ನಾವು ಎಲ್ಲರಿಗೂ ಸಹಾಯ ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
“ರಷ್ಯಾದ ತೈಲವನ್ನು ಖರೀದಿಸುವ ಭಾರತದ ನಿರ್ಧಾರವು ಜಾಗತಿಕ ಮಾರುಕಟ್ಟೆಗೆ ಪ್ರಯೋಜನಕಾರಿಯಾಗಿದೆ. ರಷ್ಯಾದ ತೈಲವು ಎಂದಿಗೂ ಔಪಚಾರಿಕ ನಿರ್ಬಂಧಗಳ ಅಡಿಯಲ್ಲಿಲ್ಲ. ಭಾರತೀಯ ಕಂಪನಿಗಳು ಬದ್ಧವಾಗಿರುವ ಬೆಲೆಯ ಮಿತಿಗೆ ಮಾತ್ರ ಒಳಪಟ್ಟಿವೆ. ಭಾರತವು ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಇಡೀ ಜಗತ್ತಿಗೆ ಸಹಾಯ ಮಾಡಿದೆ ಏಕೆಂದರೆ ನಾವು ಹಾಗೆ ಮಾಡದೇ ಇದ್ದಿದ್ದರೆ, ಜಾಗತಿಕ ತೈಲ ಬೆಲೆಗಳು USD 200 / ಬ್ಯಾರೆಲ್ಗೆ ಗಗನಕ್ಕೇರುತ್ತಿತ್ತು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.