ಬೆಂಗಳೂರು: 2025ರ ಜನವರಿ 13 ರಿಂದ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳವಾಗಿದ್ದು, ಇದು ಹಿಂದೂಗಳಿಗೆ ಅತ್ಯಂತ ಪವಿತ್ರ ಘಟನೆಯಾಗಲಿದೆ. ದೇಶ-ವಿದೇಶಗಳ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಆಗಮಿಸಿ ಪುನೀತರಾಗಲಿದ್ದಾರೆ.
ವಿಶೇಷವೆಂದರೆ ಈ ಬಾರಿಯ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಕನ್ನಡದ ಕಂಪು ಪಸರಿಲಿದೆ.
ಈ ಕುಂಭಮೇಳಕ್ಕೆ ದೇಶದಾದ್ಯಂತ ವಿವಿಧ ಸ್ಥಳಗಳಿಂದ ಭಕ್ತರು ರೈಲುಗಳ ಮೂಲಕವೂ ಆಗಮಿಸುತ್ತಾರೆ. ಈ ವೇಳೆ, ಭಿನ್ನ ಪ್ರಾದೇಶಿಕ ಭಾಷೆ ಮಾತನಾಡುವವರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಲ್ಲಿ, ಕುಂಭಮೇಳದ ವೇಳೆ ಪ್ರಯಾಗ್ ರಾಜ್ ನಿಲ್ದಾಣದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಸೇರಿದಂತೆ 12 ಭಾಷೆಗಳಲ್ಲಿ ಪ್ರಕಟಣೆ ಇರಲಿದೆ.
ಕೇಂದ್ರ ಸಚಿವ ವಿ.ಸೋಮಣ್ಣ ಅವರು ಎಕ್ಸ್ ಪೋಸ್ಟ್ ಮೂಲಕ ಈ ಮಾಹಿತಿ ನೀಡಿದ್ದಾರೆ.
“ಪ್ರಯಾಗ್ ರಾಜ್ ನಲ್ಲಿ ಕನ್ನಡದ ಕಂಪು! 2025ರ ಜನವರಿ 13 ರಿಂದ ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಪ್ರಯಾಗ್ ರಾಜ್ನಲ್ಲಿ ಕುಂಭಮೇಳ ಆರಂಭವಾಗಲಿದೆ. ಈ ಕುಂಭಮೇಳಕ್ಕೆ ದೇಶದಾದ್ಯಂತ ವಿವಿಧ ಸ್ಥಳಗಳಿಂದ ಭಕ್ತರು ರೈಲುಗಳ ಮೂಲಕ ಆಗಮಿಸುತ್ತಾರೆ. ಈ ವೇಳೆ, ಭಿನ್ನ ಪ್ರಾದೇಶಿಕ ಭಾಷೆ ಮಾತನಾಡುವವರಿಗೆ ತೊಂದರೆಯಾಗಬಾರದು ಎನ್ನುವ ದೃಷ್ಠಿಯಿಂದ, ಕುಂಭಮೇಳದ ವೇಳೆ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಸೇರಿದಂತೆ 12 ಭಾಷೆಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ. ದೇಶದ ವಿಶಾಲವಾದ ಭಾಷಾ ವೈವಿಧ್ಯತೆಯ ಜೊತೆಗೂಡಿ ಭಾರತೀಯ ರೈಲ್ವೆಯು ಸಮರ್ಥವಾಗಿ ಸಾಗುತ್ತಿದೆ. ದೇಶದ ವಿಶಾಲ ಭಾಷಾ ವೈವಿಧ್ಯತೆಯ ಜೊತೆಗೂಡಿ ಭಾರತೀಯ ರೈಲ್ವೆಯು ಸಮರ್ಥವಾಗಿ ಸಾಗುತ್ತಿದೆ” ಎಂದಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ ಕನ್ನಡದ ಕಂಪು!
2025ರ ಜನವರಿ 13 ರಿಂದ ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಪ್ರಯಾಗ್ ರಾಜ್ನಲ್ಲಿ ಕುಂಭಮೇಳ ಆರಂಭವಾಗಲಿದೆ. ಈ ಕುಂಭಮೇಳಕ್ಕೆ ದೇಶದಾದ್ಯಂತ ವಿವಿಧ ಸ್ಥಳಗಳಿಂದ ಭಕ್ತರು ರೈಲುಗಳ ಮೂಲಕ ಆಗಮಿಸುತ್ತಾರೆ. ಈ ವೇಳೆ, ಭಿನ್ನ ಪ್ರಾದೇಶಿಕ ಭಾಷೆ ಮಾತನಾಡುವವರಿಗೆ ತೊಂದರೆಯಾಗಬಾರದು ಎನ್ನುವ ದೃಷ್ಠಿಯಿಂದ, ಕುಂಭಮೇಳದ…
— V. Somanna (@VSOMANNA_BJP) November 9, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.