ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಾಣ ಮಾಡಲಾಗಿರುವ ಹೊಸ ಲಂಬಾಗಿ ತೆರೆಯುವ ಪಂಬನ್ ಸಮುದ್ರ ಸೇತುವೆಯಲ್ಲಿ ಗುರುವಾರ ಯಶಸ್ವಿ ಆಸಿಲೇಷನ್ ಮಾನಿಟರಿಂಗ್ ಸಿಸ್ಟಮ್ (OMS) ಎಂಜಿನ್ ಚಾಲನೆಯನ್ನು ಮಾಡಲಾಗಿದ್ದು, ಇದು ತನ್ನ ಶಕ್ತಿ ಮತ್ತು ಎಂಜಿನಿಯರಿಂಗ್ ನಿಖರತೆಯನ್ನು ಪ್ರದರ್ಶಿಸಿದೆ.
ಪ್ರಯೋಗದ ಸಮಯದಲ್ಲಿ, ಮಂಡಪಂ-ರಾಮೇಶ್ವರಂ ವಿಭಾಗದಲ್ಲಿ ಗಂಟೆಗೆ 121 ಕಿಮೀ ಮತ್ತು ಸೇತುವೆಯ ಮೇಲೆ ಗಂಟೆಗೆ 80 ಕಿಮೀ ವೇಗದಲ್ಲಿ ಎಂಜಿನ್ ಸಂಚರಿಸಿದೆ, ಇದು ಹೈಸ್ಪೀಡ್ ರೈಲು ಸಂಚಾರವನ್ನು ನಿರ್ವಹಿಸಲು ಅದರ ಸಿದ್ಧತೆಯನ್ನು ಖಾತ್ರಿಪಡಿಸಿದೆ.
ಮೂರು ಕೋಚ್ಗಳೊಂದಿಗೆ ಸರಕು ಸಾಗಣೆ ರೈಲನ್ನು ಒಳಗೊಂಡು ಈ ಪ್ರಯೋಗ ನಡೆಸಲಾಗಿದ್ದು, ಭಾರತದ ಮೊದಲ ಲಂಬ ಲಿಫ್ಟ್ ಸಮುದ್ರ ಸೇತುವೆಗೆ ಪ್ರಮುಖ ಮೈಲಿಗಲ್ಲು ಎಂದೇ ಈ ಪ್ರಯೋಗ ಗುರುತಿಸಲ್ಪಟ್ಟಿದೆ, ಈ ಸೇತುವೆ ಪಾಲ್ಕ್ ಜಲಸಂಧಿಯನ್ನು ವ್ಯಾಪಿಸಿದೆ, ಮಂಡಪಂ ಮತ್ತು ಪಂಬನ್ ರೈಲು ನಿಲ್ದಾಣಗಳನ್ನು ಈ ಸೇತುವೆ ಸಂಪರ್ಕಿಸುತ್ತದೆ.
ಸೇತುವೆಯು ಸುಮಾರು 2.2 ಕಿಮೀ ಉದ್ದವಿದೆ ಮತ್ತು ಭಾರತದ ಮುಖ್ಯ ಭೂಭಾಗದಲ್ಲಿರುವ ಮಂಡಪಂ ಪಟ್ಟಣವನ್ನು ಪಂಬನ್ ದ್ವೀಪ ಮತ್ತು ರಾಮೇಶ್ವರಂಗೆ ಸಂಪರ್ಕಿಸುತ್ತದೆ. ಇದು ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಿಸಲಾದ ಶತಮಾನಗಳಷ್ಟು ಹಳೆಯದಾದ ಐಕಾನಿಕ್ ರಚನೆಗೆ ಪರ್ಯಾಯವಾಗಿ ಸ್ಥಾಪಿಸಲ್ಪಟ್ಟಿದೆ.
ಭಾರತದ ಮೊದಲ ವರ್ಟಿಕಲ್ ಲಿಫ್ಟ್ ರೈಲ್ವೇ ಸಮುದ್ರ ಸೇತುವೆ ಇದಾಘಿದ್ದು, ಆಧುನಿಕ ಎಂಜಿನಿಯರಿಂಗ್ ಅದ್ಭುತವಾಗಿದೆ, ಈ ಪ್ರದೇಶದಲ್ಲಿ ಸಂಪರ್ಕ ಮತ್ತು ಕಡಲ ಸಂಚರಣೆಯನ್ನು ಮರು ವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ಇದನ್ನು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಕಾರ್ಯಗತಗೊಳಿಸುತ್ತಿದೆ.
72.5-ಮೀಟರ್ ಉದ್ದದ ಲಂಬವಾದ ಸಿಂಗಲ್ ಲಿಫ್ಟ್ ಸ್ಪ್ಯಾನ್ ಅನ್ನು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ, ಸೇತುವೆಯ ಅಡಿಯಲ್ಲಿ ಹಡಗುಗಳು ಹಾದುಹೋಗಲು ಅನುವು ಮಾಡಿಕೊಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.