ನವದೆಹಲಿ: ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಮತ್ತು “ಸೂರ್ಯನ ಬೆಳಕು ಅತ್ಯುತ್ತಮ ಸೋಂಕುನಿವಾರಕ” ಎಂಬ ಸಿದ್ಧಾಂತವನ್ನು ನಂಬಿರುವುದರಿಂದ ಎಲ್ಲಾ ಟೀಕೆಗಳನ್ನು ಸ್ವೀಕರಿಸುವಷ್ಟು ನನ್ನ ಭುಜಗಳು ವಿಶಾಲವಾಗಿವೆ ಎಂದು ನಿರ್ಗಮಿತ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಶುಕ್ರವಾರ ಹೇಳಿದ್ದಾರೆ.
50 ನೇ ಸಿಜೆಐ ಆಗಿದ್ದ ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಬಹುಶಃ ವ್ಯವಸ್ಥೆಯಾದ್ಯಂತ ಹೆಚ್ಚು ಟ್ರೋಲ್ ಮಾಡಲ್ಪಟ್ಟ ವ್ಯಕ್ತಿಗಳು ಮತ್ತು ನ್ಯಾಯಾಧೀಶರಲ್ಲಿ ನಾನು ಒಬ್ಬ ಎಂದಿದ್ದಾರೆ. ಅಲ್ಲದೇ ಸೋಮವಾರದಿಂದ ಸೋಷಿಯಲ್ ಮೀಡಿಯಾ ಟ್ರೋಲರ್ಗಳು “ನಿರುದ್ಯೋಗಿಗಳು” ಆಗುತ್ತಾರೆ ಎಂದು ಹಾಸ್ಯ ಮಾಡಿದ್ದಾರೆ.
ಜಸ್ಟಿಸ್ ಚಂದ್ರಚೂಡ್ ಅವರು ನವೆಂಬರ್ 9, 2022 ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡರು. 1978 ಮತ್ತು 1985 ರ ನಡುವೆ ಸುದೀರ್ಘ ಕಾಲದವರೆಗೆ ಸಿಜೆಐ ಆಗಿ ಸೇವೆ ಸಲ್ಲಿಸಿದ ತಮ್ಮ ತಂದೆ ವೈ ವಿ ಚಂದ್ರಚೂಡ್ ಅವರ ಹೆಜ್ಜೆ ಗುರುತುಗಳಲ್ಲೇ ಮುನ್ನಡೆದರು ಮತ್ತು ಶುಕ್ರವಾರ ಅವರ ಕೊನೆಯ ಕೆಲಸದ ದಿನವಾಗಿತ್ತು. ಅವರು ನವೆಂಬರ್ 10, ಭಾನುವಾರದಂದು ನಿವೃತ್ತರಾಗುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಮನೆಗೆ ಗಣೇಶ ಪೂಜೆಗೆ ಆಹ್ವಾನಿಸಿದ ನಂತರ ನ್ಯಾಯಮೂರ್ತಿ ಚಂದ್ರಚೂಡ್ ಅವರು ಕೆಲವರಿಂದ ಟೀಕೆಗಳನ್ನು ಎದುರಿಸಿದ್ದರು ಮತ್ತು ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ ಕೊನೆಗೊಳ್ಳಲು ದೇವರಲ್ಲಿ ಪ್ರಾರ್ಥಿಸಿದೆ ಎಂಬ ಅವರ ಹೇಳಿಕೆಗೂ ಆಕ್ಷೇಪಗಳು ವ್ಯಕ್ತವಾಗಿತ್ತು.
ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಬಾಲ್ಯದಿಂದ ಹಿಡಿದು ಮದುವೆ ಮತ್ತು ಕಾನೂನು ಕ್ಷೇತ್ರಕ್ಕೆ ಪ್ರವೇಶಿಸಿದ ನಂತರ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗುವವರೆಗಿನ ತಮ್ಮ ಜೀವನದ ಅನುಭವಗಳನ್ನು ನಿನ್ನೆ ದೇಶದ ನ್ಯಾಯಾಂಗದ ಸದಸ್ಯರೊಂದಿಗೆ ಹಂಚಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.