ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಚೀನಿ ಪ್ರಜೆಗಳ ಮೇಲಿನ ದಾಳಿಗಳು ಹೆಚ್ಚುತ್ತಲೇ ಇದೆ. ಈ ವರ್ಷ ನಡೆದ ಎರಡನೇ ಪ್ರಕರಣದಲ್ಲಿ ಕರಾಚಿಯ SITE ಇಂಡಸ್ಟ್ರಿಯಲ್ ಏರಿಯಾದಲ್ಲಿ ನವೆಂಬರ್ 5ರಂದು ಚೀನಾದ ಪ್ರಜೆಗಳ ಮೇಲೆ ಗುಂಡು ಹಾರಿಸಿ ಘಾಸಿಗೊಳಿಸಲಾಗಿದೆ. ಹೀಗಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಚೀನಾ ರಾಯಭಾರ ಕಚೇರಿಯು ಸಮನ್ಸ್ ನೀಡಿ ಇಬ್ಬರು ಚೀನೀ ಪ್ರಜೆಗಳು ಗಾಯಗೊಂಡ ಘಟನೆಯನ್ನು ಖಂಡಿಸಿದೆ.
ಚೀನಾದ ಪ್ರಜೆಗಳಾದ ವಾಂಗ್ ಕ್ಸಿಂಗ್ ಝಾಂಗ್, ಝೆಂಗ್ ಲುವೆನ್, ಝೌ ಬಾಲಿನ್ ಮತ್ತು ವೀ ಸಿಕ್ಸಿಯಾನ್ ಅವರು ಹೊಸ ಯಂತ್ರೋಪಕರಣಗಳನ್ನು ಅಳವಡಿಸಲು ಕರಾಚಿಯ ಲಿಬರ್ಟಿ ಮಿಲ್ನಲ್ಲಿದ್ದ ಸಂದರ್ಭ ಗುಂಡಿನ ದಾಳಿ ನಡೆದಿದೆ. ಈ ವೇಳೆ ದಾಳಿ ನಡೆದು ಇಬ್ಬರಿಗೆ ಗಾಯವಾಗಿದೆ.
ಖಾಸಗಿ ಏಜೆನ್ಸಿ ಮತ್ತು ಸಿಂಧ್ ಪೊಲೀಸರ ವಿಶೇಷ ರಕ್ಷಣಾ ಘಟಕ (ಎಸ್ಪಿಯು) ರಕ್ಷಣೆಯೊಂದಿಗೆ ಚೀನಾದ ಪ್ರಜೆಗಳು ಪ್ರತಿದಿನ ಬುಲೆಟ್ ಪ್ರೂಫ್ ವಾಹನದಲ್ಲಿ ಕೆಲಸಕ್ಕೆ ಆಗಮಿಸುತ್ತಾರೆ ಎಂದು ವರದಿಗಳು ಹೇಳುತ್ತವೆ.
“ಚೀನಾ ಪ್ರಜೆಗಳ ಮೇಲಿನ ದಾಳಿಯನ್ನು ಖಂಡಿಸಲು ಮತ್ತು ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಈ ಘಟನೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸುವ ಪ್ರಕ್ರಿಯೆಯನ್ನು ನಾನು ವೈಯಕ್ತಿಕವಾಗಿ ನೋಡಿಕೊಳ್ಳುತ್ತಿದ್ದೇನೆ ಮತ್ತು ಅವರಿಗೆ ತಕ್ಕ ಶಿಕ್ಷೆಯನ್ನು ನೀಡಲಾಗುವುದು ಎಂದು ಖಚಿತಪಡಿಸಿಕೊಳ್ಳುತ್ತಿದ್ದೇನೆ” ಎಂದು ಶೆಹಬಾಜ್ ಷರೀಫ್ ಪಾಕಿಸ್ತಾನದ ಚೀನಾ ರಾಯಭಾರಿ ಜಿಯಾಂಗ್ ಜೈಡಾಂಗ್ ಅವರಿಗೆ ತಿಳಿಸಿದ್ದಾರೆ.
ಚೀನಾವು ಪಾಕಿಸ್ತಾನದ ದೀರ್ಘಕಾಲದ ಸ್ನೇಹಿತ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿಕೊಳ್ಳುತ್ತಾರೆ, ಭಾರತದ ಶತ್ರು ನೆರೆಯು ಚೀನಾದ ಕೈಗೊಂಬೆಯಾಗಿರುವುದು ಅಸಲಿ ಸತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.