ಬೆಂಗಳೂರು: ಕರ್ನಾಟಕ ವಕ್ಫ್ ಮಂಡಳಿಯು ಕರ್ನಾಟಕದ ಐತಿಹಾಸಿಕ ಬೀದರ್ ಕೋಟೆಯಲ್ಲಿರುವ 17 ರಚನೆಗಳನ್ನು ತನ್ನ ಆಸ್ತಿ ಎಂದು ಹೇಳಿಕೊಂಡಿದೆ. ವರದಿಗಳ ಪ್ರಕಾರ, ಈ ಆಸ್ತಿಗಳು ಕೋಟೆಯ ಪ್ರಮುಖ ಹೆಗ್ಗುರುತುಗಳಾಗಿದ್ದು, ಇದು ಜಿಲ್ಲಾ ಕೇಂದ್ರವಾದ ಬೀದರ್ನಲ್ಲಿದೆ.
ಕೋಟೆಯ ಪಾಲನೆಯ ಹೊಣೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ವಹಿಸಿಕೊಂಡಿದೆ. ಆದರೀಗ ಬೀದರ್ ಕೋಟೆ ಆವರಣದಲ್ಲಿರುವ 60 ಆಸ್ತಿಗಳಲ್ಲಿ 17 ತನಗೆ ಸೇರಿದ್ದು ಎಂದು ವಕ್ಫ್ ಮಂಡಳಿ ಘೋಷಿಸಿದೆ.
ಈ ಆಸ್ತಿಗಳಲ್ಲಿ ಸುಪ್ರಸಿದ್ಧ 16-‘ಕಂಬ’ (ಸ್ತಂಭಗಳು) ಮಸೀದಿ ಮತ್ತು ಹಲವಾರು ಬಹಮನಿ ರಾಜಮನೆತನದ 14 ಸಮಾಧಿಗಳು ಮತ್ತು ಅವರ ಕುಟುಂಬಗಳು ಸಮಾಧಿ ಸೇರಿದೆ.
17 ರಚನೆಗಳನ್ನು ವಕ್ಫ್ ಮಂಡಳಿ ತನ್ನದೆಂದು ಹೇಳಿಕೊಂಡಿದೆ. ಆದರೆ ಎಎಸ್ಐಗೆ ಇನ್ನೂ ನೋಟಿಸ್ಗಳನ್ನು ನೀಡಿಲ್ಲ ಎಂದು ವಕ್ಫ್ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈಗಾಗಲೇ ವಕ್ಫ್ ಇದ್ದಬದ್ದ ಆಸ್ತಿಗಳನ್ನು ತನ್ನದೆಂದು ಹೇಳಿಕೊಂಡು ತಿರುಗುತ್ತಿದೆ. ಇದಕ್ಕಾಗಿ ಸಾರ್ವಜನಿಕರಿಂದ ತೀವ್ರ ಟೀಕೆಯನ್ನು ಎದುರಿಸುತ್ತಿದೆ. ಹೀಗಾಗಿ ಪುರಾತತ್ವ ಇಲಾಖೆಗೆ ನೋಟಿಸ್ ನೀಡಿ ಅಧಿಕೃತವಾಗಿ ಇದನ್ನು ತನ್ನದೆಂದು ಹೇಳಿಕೊಳ್ಳುವ ಪ್ರಸ್ತುತ ಅದಕ್ಕೆ ಕಷ್ಟವಾಗಬಹುದು ಎನ್ನಲಾಗಿದೆ.
“ಹಲವು ದಶಕಗಳಿಂದ ಐತಿಹಾಸಿಕ ಸ್ಮಾರಕಗಳ ಪಾಲಕ ಮತ್ತು ರಕ್ಷಕರಾಗಿದ್ದ ಎಎಸ್ಐಗೆ ಮಂಡಳಿಯು ಹೇಗೆ ನೋಟಿಸ್ ನೀಡಬಹುದು? ವಕ್ಫ್ ಬೋರ್ಡ್ ಹೆಸರಿನಲ್ಲಿ ಸಾಕಷ್ಟು ಕಿಡಿಗೇಡಿತನ ಮತ್ತು ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ, ಇದು ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರನ್ನು ತರುತ್ತಿದೆ ಎಂದು ವಕ್ಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.