ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಸುಪ್ರೀಂಕೋರ್ಟ್ನ ಮೂರು ಪ್ರಕಟಣೆಗಳನ್ನು ಬಿಡುಗಡೆ ಮಾಡಿದ್ದಾರೆ. ʼಜಸ್ಟಿಸ್ ಫಾರ್ ದಿ ನೇಷನ್: ರಿಫ್ಲೆಕ್ಷನ್ಸ್ ಆನ್ 75 ಇಯರ್ಸ್ ಆಫ್ ಸುಪ್ರೀಂಕೋರ್ಟ್ʼ, Prisons in India: Mapping Prison Manuals and Measures for Reformation and Decongestion and Legal Aid through Law Schools, A Report on working of Legal Aid Cells in India ಎಂಬುದು ಆ ಮೂರು ಪ್ರಕಟಣೆಗಳಾಗಿವೆ.
ನ್ಯಾಯ ವಿತರಣಾ ವ್ಯವಸ್ಥೆಯು ನ್ಯಾಯಯುತ ಸಮಾಜದ ಕಡೆಗೆ ರಾಷ್ಟ್ರದ ನಡಿಗೆಯನ್ನು ಬಲಪಡಿಸಬೇಕು ಎಂದು ಪ್ರಕಟಣೆ ಬಿಡುಗಡೆ ಸಂದರ್ಭದಲ್ಲಿ ದ್ರೌಪದಿ ಮುರ್ಮು ಹೇಳಿದ್ದಾರೆ.
“ಸುಪ್ರೀಂಕೋರ್ಟ್ ಭಾರತೀಯ ನೈತಿಕತೆ ಮತ್ತು ನೈಜತೆಗಳಲ್ಲಿ ಬೇರೂರಿರುವ ನ್ಯಾಯಶಾಸ್ತ್ರವನ್ನು ಅಭಿವೃದ್ಧಿಪಡಿಸಿದೆ. ಸಮಾನತೆ ಮತ್ತು ಸಮಾನ ನ್ಯಾಯದ ಆದರ್ಶವು ನ್ಯಾಯಾಂಗಕ್ಕೆ ಮಾರ್ಗದರ್ಶಿ ಸೂತ್ರವಾಗಬೇಕು. ಲೋಕ ಅದಾಲತ್ಗಳನ್ನು ನಡೆಸುವುದು ಮತ್ತು ಜಿಲ್ಲಾ ಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನವನ್ನು ಆಯೋಜಿಸುವುದು ನ್ಯಾಯ ವಿತರಣಾ ವ್ಯವಸ್ಥೆಯ ನೆಲದ ವಾಸ್ತವತೆಯನ್ನು ತಿಳಿಸಲು ಎರಡು ಉದಾಹರಣೆಗಳಾಗಿವೆ” ಎಂದು ರಾಷ್ಟ್ರಪತಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನೆಲದ ವಾಸ್ತವತೆಯ ಸ್ಪಷ್ಟ ಚಿತ್ರಣವಿಲ್ಲದೆ, ಕಾನೂನು ಮತ್ತು ನೀತಿಗಳು ಸೀಮಿತ ಪರಿಣಾಮವನ್ನು ಬೀರುತ್ತವೆ. ಇಂದು ಬಿಡುಗಡೆಯಾಗಿರುವ ಎಲ್ಲಾ ಪ್ರಕಟಣೆಗಳ ಮುಖ್ಯ ಲಕ್ಷಣವೆಂದರೆ ಪಾರದರ್ಶಕತೆ. ಮೂರು ಪ್ರಕಟಣೆಗಳಲ್ಲಿ ಒಂದು ಪ್ರಬಂಧಗಳ ಸಂಗ್ರಹವಾಗಿದ್ದು, ಸ್ಥಾಪನೆಯಿಂದ ಹಿಡಿದು ನ್ಯಾಯಾಲಯದ ನ್ಯಾಯಶಾಸ್ತ್ರವನ್ನು ಇದು ವಿಶ್ಲೇಷಿಸುತ್ತದೆ, ಉಳಿದ ಎರಡು ವಿಶ್ವವಿದ್ಯಾಲಯಗಳಲ್ಲಿನ ಕಾನೂನು ನೆರವು ಕೋಶಗಳ ಕಾರ್ಯನಿರ್ವಹಣೆ ಮತ್ತು ಕಾರಾಗೃಹಗಳ ಸ್ಥಿತಿಯನ್ನು ನಿರ್ಣಯಿಸುವ ಅಧ್ಯಯನಗಳಾಗಿವೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.