ನವದೆಹಲಿ: ಭಾರತ ಮತ್ತು ನೈಜೀರಿಯಾ ನಡುವೆ ಎರಡನೇ ಕಾರ್ಯತಾಂತ್ರಿಕ ಮತ್ತು ಭಯೋತ್ಪಾದನೆ ನಿಗ್ರಹ ಸಂವಾದ ಮಂಗಳವಾರ ನವದೆಹಲಿಯಲ್ಲಿ ಮುಕ್ತಾಯವಾಯಿತು.
ಎರಡು ದಿನಗಳ ಕಾಲ ನಡೆದ ಸಂವಾದದಲ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ನೈಜೀರಿಯಾದ ಭದ್ರತಾ ಸಲಹೆಗಾರ ನುಹು ರಿಬಾದು ಅವರು ಭಾರತ-ನೈಜೀರಿಯಾದ ಕಾರ್ಯತಂತ್ರದ ಪಾಲುದಾರಿಕೆಯ ಚೌಕಟ್ಟಿನೊಳಗೆ ಭಯೋತ್ಪಾದನೆ, ಉಗ್ರವಾದ, ಮೂಲಭೂತೀಕರಣದಿಂದ ಹೊರಹೊಮ್ಮುವ ಬೆದರಿಕೆಗಳು ಮತ್ತು ಸವಾಲುಗಳ ಕುರಿತು ಆಳವಾದ ಚರ್ಚೆಗಳನ್ನು ನಡೆಸಿದರು.
ಅಂತಾರಾಷ್ಟ್ರೀಯ ಅಪರಾಧ, ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆಯ ಬಗ್ಗೆಯೂ ಮಹತ್ವದ ಚರ್ಚೆಗಳು ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಉಭಯ ನಾಯಕರು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ತಮ್ಮ ಹೋರಾಟವನ್ನು ಹೆಚ್ಚಿಸಲು ಸಹಕಾರದ ನಿರ್ದಿಷ್ಟ ಕ್ಷೇತ್ರಗಳನ್ನು ಗುರುತಿಸಿದ್ದಾರೆ, ಯಾವುದೇ ರೂಪದಲ್ಲಿ ಅಥವಾ ಅಭಿವ್ಯಕ್ತಿಯಲ್ಲಿ ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ ಎಂದು ತಮ್ಮ ದೃಢವಾದ ನಂಬಿಕೆಯನ್ನು ಪುನರುಚ್ಚರಿಸಿದರು ಎನ್ನಲಾಗಿದೆ.
ದ್ವಿಪಕ್ಷೀಯ ಸಾಮರ್ಥ್ಯ ನಿರ್ಮಾಣದಲ್ಲಿ ಸಹಕಾರವನ್ನು ಹೆಚ್ಚಿಸಲು ಮತ್ತು ಅಂತರಾಷ್ಟ್ರೀಯ ರಂಗದಲ್ಲಿ ಸಹಕಾರವನ್ನು ಬಲಪಡಿಸಲು ಭಾರತ-ನೈಜೀರಿಯಾ ಒಪ್ಪಿಕೊಂಡಿವೆ.
ಭಾರತ ಭೇಟಿಯ ಸಮಯದಲ್ಲಿ, ನೈಜೀರಿಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ನುಹು ರಿಬಾದು ಮನೇಸರ್ನಲ್ಲಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ ಆವರಣಕ್ಕೂ ಭೇಟಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.