ನವದೆಹಲಿ: ಕೇಂದ್ರ ಸರ್ಕಾರವು ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡುತ್ತಿದೆ. ಇದೀಗ ರಾಷ್ಟ್ರದ ಆತ್ಮನಿರ್ಭರ ಉಪಕ್ರಮಕ್ಕೆ ಗಮನಾರ್ಹವಾದ ಉತ್ತೇಜನ ಎಂಬಂತೆ ಭಾರತೀಯ ಸೇನೆಯು 550 ‘ಅಸ್ಮಿ’ ಮೆಷಿನ್ ಪಿಸ್ತೂಲ್ಗಳನ್ನು ತನ್ನ ಉತ್ತರ ಕಮಾಂಡ್ಗೆ ಸೇರ್ಪಡೆಗೊಳಿಸಿದೆ.
ಭಾರತೀಯ ಸೇನೆಯ ಕರ್ನಲ್ ಪ್ರಸಾದ್ ಬನ್ಸೋಡ್ DRDO ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಈ ಮೆಶಿನ್ ಪಿಸ್ತೂಲ್ ಅನ್ನು ಹೈದರಾಬಾದಿನ ಲೋಕೇಶ್ ಮೆಷಿನ್ ಸಂಸ್ಥೆ ಸ್ಥಳೀಯವಾಗಿ ತಯಾರಿಸುತ್ತಿದೆ.
‘ಅಸ್ಮಿ’ ಮೆಷಿನ್ ಪಿಸ್ತೂಲ್ ದೃಢವಾದ, ಕಾಂಪ್ಯಾಕ್ಟ್ ಮತ್ತು ವಿಶ್ವಾಸಾರ್ಹ ಆಯುಧವಾಗಿದ್ದು, ನಿಕಟ ಕ್ವಾರ್ಟರ್ ಯುದ್ಧಗಳು ಮತ್ತು ವಿಶೇಷ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರ ವಿಶಿಷ್ಟವಾದ ಸೆಮಿ-ಬುಲ್ಪಪ್ ವಿನ್ಯಾಸವು ಪಿಸ್ತೂಲ್ ಮತ್ತು ಸಬ್ಮಷಿನ್ ಗನ್ನಂತೆ ಸಿಂಗಲ್ ಹ್ಯಾಂಡೆಡ್ ನಿರ್ವಹಣೆಯನ್ನು ಅನುಮತಿಸುತ್ತದೆ.
ಈ 100% ಮೇಡ್-ಇನ್-ಇಂಡಿಯಾ ಮೆಶಿನ್ ಪಿಸ್ತೂಲ್ ಸೇರ್ಪಡೆಯು ರಕ್ಷಣಾ ಉತ್ಪಾದನೆಯಲ್ಲಿ ರಾಷ್ಟ್ರವನ್ನು ಸ್ವಾವಲಂಬನೆಯತ್ತ ಮುನ್ನಡೆಸಲು ಭಾರತೀಯ ಸೇನೆಯ ಅಚಲವಾದ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಸೇನೆ ಹೇಳಿದೆ..
Enhancing #Atmanirbharta : Indigenously Developed 'Asmi' Machine Pistols
In a significant boost to the nation's #Atmanirbharta initiative, #IndianArmy inducted 550 'Asmi' machine pistols into #NorthernCommand. The weapon which has been developed by Colonel Prasad Bansod of the… pic.twitter.com/q4Ir07x8dx
— ADG PI – INDIAN ARMY (@adgpi) November 5, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.