ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕಮಾಂಡರ್ನ ನಿರ್ಮೂಲನೆಯಲ್ಲಿ ಬಿಸ್ಕತ್ ಮಹತ್ವದ ಪಾತ್ರವನ್ನು ವಹಿಸಿರುವುದು ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ.
ಶ್ರೀನಗರದ ಡೌನ್ಟೌನ್ನ ಜನನಿಬಿಡ ಖಾನ್ಯಾರ್ ಪ್ರದೇಶದಲ್ಲಿ ಶನಿವಾರ ನಡೆದ ಎನ್ಕೌಂಟರ್ನಲ್ಲಿ ಉಸ್ಮಾನ್ ಎಂಬ ಉಗ್ರ ಕೊಲ್ಲಲ್ಪಟ್ಟಿದ್ದಾನೆ, ಎರಡು ವರ್ಷಗಳ ನಂತರ ಜಮ್ಮು-ಕಾಶ್ಮೀರದ ಬೇಸಿಗೆಯ ರಾಜಧಾನಿ ಶ್ರೀನಗರದಲ್ಲಿ ನಡೆದ ಮೊದಲ ಗುಂಡಿನ ಚಕಮಕಿ ಇದಾಗಿದೆ. ಸ್ಥಳೀಯ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿವೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಕಮಾಂಡರ್ ಉಸ್ಮಾನ್ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಬೀದಿ ನಾಯಿಗಳು ದೊಡ್ಡ ಸವಾಲನ್ನು ಒಡ್ಡುವ ಸಾಧ್ಯತೆ ಇತ್ತು. ಬೀದಿನಾಯಿಗಳು ಬೊಗಳಿದರೆ ಭಯೋತ್ಪಾದಕ ಸ್ಥಳದಿಂದ ಪರಾರಿಯಾಗಿ ಬಿಡುತ್ತಿದ್ದ. ಹೀಗಾಗಿ ಭದ್ರತಾ ಸಿಬ್ಬಂದಿ ಉಗ್ರನ ಮೇಲೆ ದಾಳಿ ಮಾಡುವುದಕ್ಕೂ ಮುನ್ನ ಒಂದಷ್ಟು ಬಿಸ್ಕೇಟ್ಗಳನ್ನು ಹಾಕಿ ನಾಯಿಗಳು ಮೌನವಾಗುವಂತೆ ಮಾಡಿವೆ.
ಕಣಿವೆಯ ಭೂಪ್ರದೇಶದ ಬಗ್ಗೆ ಚೆನ್ನಾಗಿ ತಿಳಿದಿರುವ ಉಸ್ಮಾನ್, 2000 ರ ದಶಕದ ಆರಂಭದಿಂದಲೂ ಹಲವಾರು ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಮಹತ್ವದ ವ್ಯಕ್ತಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಸ್ವಲ್ಪ ಸಮಯವಿದ್ದ ಬಳಿಕ ಈತ 2016-17 ರ ಸುಮಾರಿಗೆ ಮತ್ತೆ ಈ ಪ್ರದೇಶಕ್ಕೆ ನುಸುಳಿದ್ದಾನೆ ಮತ್ತು ಕಳೆದ ವರ್ಷ ಪೊಲೀಸ್ ಇನ್ಸ್ಪೆಕ್ಟರ್ ಮಸ್ರೂರ್ ವಾನಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವಲ್ಲಿ ಭಾಗಿಯಾಗಿದ್ದಾನೆ.
ಗುಪ್ತಚರ ಮಾಹಿತಿಯು ಉಸ್ಮಾನ್ ವಸತಿ ಪ್ರದೇಶದಲ್ಲಿ ಇರುವುದನ್ನು ಖಚಿತಪಡಿಸಿದ ನಂತರ ಯಾವುದೇ ಅಡೆತಡೆ ಉಂಟಾಗದಂತೆ ಕಾರ್ಯಾಚರಣೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನಿಖರವಾದ ಒಂಬತ್ತು-ಗಂಟೆಗಳ ಯೋಜನಾ ಹಂತವನ್ನು ಭದ್ರತಾ ಪಡೆಗಳು ಅನುಸರಿಸಿದವು.
ಸಂಪೂರ್ಣ ನಿಯೋಜನೆಯನ್ನು ಫಜಾರ್ (ಮುಂಜಾನೆ ಪ್ರಾರ್ಥನೆಗಳು)ಗೆ ಮುಂಚಿತವಾಗಿ ಸಜ್ಜುಗೊಳಿಸಲಾಯಿತು, ಭದ್ರತಾ ಪಡೆಗಳು 30 ಮನೆಗಳನ್ನು ಸುತ್ತುವರೆದವು.
ಉಸ್ಮಾನ್ — AK-47, ಪಿಸ್ತೂಲ್ ಮತ್ತು ಹಲವಾರು ಗ್ರೆನೇಡ್ಗಳೊಂದಿಗೆ ಶಸ್ತ್ರಸಜ್ಜಿತವಾಗಿದ್ದ ಹಿನ್ನಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ತೀವ್ರ ಗುಂಡಿನ ವಿನಿಮಯದಲ್ಲಿ ತೊಡಗಿಸಿಕೊಂಡ. ಘರ್ಷಣೆಯ ಸಮಯದಲ್ಲಿ, ಕೆಲವು ಗ್ರೆನೇಡ್ಗಳು ಸ್ಫೋಟಗೊಂಡವು, ಮನೆಯಲ್ಲಿ ಬೆಂಕಿ ಹೊತ್ತಿಕೊಂಡವು, ಬೆಂಕಿ ಹತ್ತಿರದ ಕಟ್ಟಡಗಳಿಗೆ ಹರಡುವುದನ್ನು ತಡೆಯಲು ಭದ್ರತಾ ಸಿಬ್ಬಂದಿ ತ್ವರಿತವಾಗಿ ಕಾರ್ಯೋನ್ಮುಖರಾದರು
ಹಲವಾರು ಗಂಟೆಗಳ ತೀವ್ರ ಗುಂಡಿನ ದಾಳಿಯ ನಂತರ, ಉಸ್ಮಾನ್ ಉಸಿರು ಚೆಲ್ಲಿದ್ದಾನೆ. ಎನ್ಕೌಂಟರ್ನಲ್ಲಿ ನಾಲ್ವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಈ ಕಾರ್ಯಾಚರಣೆಯು ಪಡೆಗಳಿಗೆ ಗಮನಾರ್ಹವಾದ ವಿಜಯವಾಗಿದೆ. ಅದರಲ್ಲೂ ಲಷ್ಕರ್ ಇ ತೋಯ್ಬಾದ ʼದಿ ರೆಸಿಸ್ಟೆನ್ಸ್ ಫ್ರಂಟ್ʼ ವಿರುದ್ಧದ ಮಹತ್ವದ ಗೆಲುವು ಎಂದೇ ಹೇಳಬೇಕು. ದಿ ರೆಸಿಸ್ಟೆನ್ಸ್ ಫ್ರಂಟ್, ಸ್ಥಳೀಯರಲ್ಲದ ಕಾರ್ಮಿಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಹೆಚ್ಚು ಗುರಿಯಾಗಿಸಿಕೊಂಡ ಪದೇ ಪದೇ ಕಾಶ್ಮೀರದಲ್ಲಿ ದಾಳಿ ನಡೆಸುತ್ತಲೇ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.