ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಸನಾತನ ಧರ್ಮವನ್ನು ರಕ್ಷಿಸಲು ತಮ್ಮ ಪಕ್ಷದಲ್ಲೇ ಹೊಸ ಘಟನಕವನ್ನು ಆರಂಭಿಸಿದ್ದಾರೆ. ಅದುವೇ ʼನರಸಿಂಹ ವಾರಾಹಿ ಬ್ರಿಗೇಡ್.
“ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ, ಆದರೆ ನನ್ನ ನಂಬಿಕೆಯಲ್ಲಿ ನಾನು ದೃಢವಾಗಿರುತ್ತೇನೆ, ಸಾಮಾಜಿಕ ಜಾಲತಾಣಗಳಲ್ಲಿ ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಅದರ ಬಗ್ಗೆ ಅಗೌರವದಿಂದ ಮಾತನಾಡುವವರು ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ನಾನು ನಮ್ಮ ಪಕ್ಷದೊಳಗೆ ‘ನರಸಿಂಹ ವಾರಾಹಿ ಎಂಬ ಹೆಸರಿನ ಸಮರ್ಪಿತ ಘಟಕವನ್ನು ಸ್ಥಾಪಿಸುತ್ತಿದ್ದೇನೆ. ಸನಾತನ ಧರ್ಮದ ರಕ್ಷಣೆಗಾಗಿ ಈ ಬ್ರಿಗೇಡ್ ಕಾರ್ಯನಿರ್ವಹಿಸಲಿದೆ’ ಎಂದು ಕಲ್ಯಾಣ್ ಹೇಳಿದ್ದಾರೆ.
ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪ್ರಸಾದದಲ್ಲಿ ಕಲಬೆರಕೆ ತುಪ್ಪದ ಬಳಕೆಯ ಬಗ್ಗೆ ಇತ್ತೀಚಿಗೆ ದೊಡ್ಡ ಮಟ್ಟದ ವಿವಾದ ಭುಗಿಲೆದ್ದ ಬಳಿಕ ಕಲ್ಯಾಣ್ ಅವರು ಈ ಘೋಷಣೆ ಮಾಡಿದ್ದಾರೆ.
ಕಲ್ಯಾಣ್ ಕಳೆದ ತಿಂಗಳು ಸನಾತನ ಧರ್ಮವನ್ನು ರಕ್ಷಿಸಲು ಮತ್ತು ಅದರ ನಂಬಿಕೆಗಳನ್ನು ಅಗೌರವಿಸುವ ಕ್ರಮಗಳನ್ನು ತಡೆಯಲು ಕಠಿಣ ರಾಷ್ಟ್ರೀಯ ಕಾನೂನಿಗೆ ಕರೆ ನೀಡಿದ್ದರು.
ತಿರುಪತಿಯಲ್ಲಿ ವಾರಾಹಿ ಘೋಷಣೆಯ ಸಂದರ್ಭದಲ್ಲಿ, “ಸನಾತನ ಧರ್ಮವನ್ನು ರಕ್ಷಿಸಲು ಮತ್ತು ಅದರ ನಂಬಿಕೆಗಳಿಗೆ ಹಾನಿಯಾಗದಂತೆ ಪ್ರಬಲ ರಾಷ್ಟ್ರೀಯ ಕಾಯಿದೆಯ ಅಗತ್ಯವಿದೆ, ಈ ಕಾಯಿದೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಮತ್ತು ಭಾರತದಾದ್ಯಂತ ಏಕರೂಪವಾಗಿ ಜಾರಿಗೊಳಿಸಬೇಕು” ಎಂದು ಹೇಳಿದರು.
ಕಲ್ಯಾಣ್ ಅವರು ಈ ಕಾನೂನಿನ ಜಾರಿಯನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸನಾತನ ಧರ್ಮ ಸಂರಕ್ಷಣಾ ಮಂಡಳಿಯನ್ನು ರಚಿಸುವಂತೆ ಸಲಹೆ ನೀಡಿದರು. ದೇವಾಲಯದ ನೈವೇದ್ಯ ಮತ್ತು ಪ್ರಸಾದಕ್ಕೆ ಬಳಸುವ ವಸ್ತುಗಳ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸನಾತನ ಧರ್ಮ ಪ್ರಮಾಣೀಕರಣದ ಮಹತ್ವವನ್ನು ಅವರು ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.