ವಾಷಿಂಗ್ಟನ್ ಡಿಸಿ: ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಲವು ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲೂ ಅವರು ಹಿಂದೂಗಳಿಗೆ ತಮ್ಮ ದೀಪಾವಳಿ ಶುಭಾಶಯಗಳನ್ನು ತಿಳಿಸುವುದನ್ನು ಮರೆತಿಲ್ಲ. ಭಾರತೀಯ ಹಿನ್ನೆಲೆಯನ್ನು ಹೊಂದಿರುವ ಅವರು ಅಕ್ಟೋಬರ್ 28ರಂದು ಶ್ವೇತಭವನದಲ್ಲಿ ನಡೆದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಸ್ಟ್ರೀಮ್ ಮಾಡಿದ ವೀಡಿಯೊ ಮೂಲಕ ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ.
“ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ದೀಪಾವಳಿಉ ಶುಭಾಶಯಗಳು” ಎಂದು ವಿಲಿಯಮ್ಸ್ ಹೇಳಿದ್ದಾರೆ.
“ಪ್ರಪಂಚದಾದ್ಯಂತ ಮತ್ತು ಶ್ವೇತಭವನದಲ್ಲಿ ಇಂದು ಬೆಳಕಿನ ಹಬ್ಬವನ್ನು ಆಚರಿಸುತ್ತಿರುವ ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಲು ನಾನು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ
ಭೂಮಿಯಿಂದ 263 ಮೈಲುಗಳಷ್ಟು ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ದೀಪಾವಳಿಯನ್ನು ಆಚರಿಸುವ ಅನನ್ಯ ಅವಕಾಶವನ್ನು ನಾನು ಪಡೆಯುತ್ತಿದ್ದೇನೆ ಎಂದು ಹೇಳಿರುವ ಸುನೀತ ವಿಲಿಯಮ್ಸ್, ದೀಪಾವಳಿ ಮತ್ತು ಇತರ ಭಾರತೀಯ ಹಬ್ಬಗಳ ಬಗ್ಗೆ ನನ್ನ ತಂದೆ ನನಗೆ ಸಾಕಷ್ಟು ಕಲಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿ ತನ್ನ ಭಾರತೀಯ ಬೇರುಗಳನ್ನು ನೆನಪಿಸಿಕೊಂಡರು.
ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಿದ್ದಕ್ಕಾಗಿ ಮತ್ತು ಯುನೈಟೆಡ್ ಸ್ಟೇಟ್ಸ್ನ ಪ್ರಗತಿಯಲ್ಲಿ ದಕ್ಷಿಣ ಏಷ್ಯಾದ ಸಮುದಾಯವು ನೀಡಿದ ಕೊಡುಗೆಗಳನ್ನು ಗುರುತಿಸಿದ್ದಕ್ಕಾಗಿ ಅವರು ಯುಎಸ್ ಅಧ್ಯಕ್ಷ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಧನ್ಯವಾದ ಅರ್ಪಿಸಿದರು.
ಬಿಡೆನ್ ಅವರು ಯುಎಸ್ ಅಧ್ಯಕ್ಷರಾಗಿ ಕೊನೆಯ ಬಾರಿಗೆ ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ್ದಾರೆ ಮತ್ತು ಜನರಿಗೆ ಬೆಳಕಿನ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.