ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್ಡಿಎಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದು, ಭವಿಷ್ಯದಲ್ಲಿ ‘ಮಹಾಘಟಬಂಧನ್’ಗೆ ಮತ್ತೆ ಸೇರುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ.
ಬಿಹಾರದಲ್ಲಿ ನಡೆದ ಉನ್ನತ ಮಟ್ಟದ ಎನ್ಡಿಎ ಸಭೆಯಲ್ಲಿ ಮೈತ್ರಿಕೂಟದ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿ, 2025 ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸ್ಪರ್ಧಿಸಲು ತಮ್ಮ ಬದ್ಧತೆಯನ್ನು ಘೋಷಿಸಿದರು.
ಮಹಾಮೈತ್ರಿಕೂಟ ಎಂದೂ ಕರೆಯಲ್ಪಡುವ ಕಾಂಗ್ರೆಸ್ ನೇತೃತ್ವದ ‘ಮಹಾಘಟಬಂಧನ್’ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ತನ್ನ ಹಿಂದಿನ ನಿರ್ಧಾರ ತಪ್ಪಿನಿಂದ ಕೂಡಿತ್ತು ಎಂಬುದನ್ನು ನಿತೀಶ್ ಈ ವೇಳೆ ಒಪ್ಪಿಕೊಂಡಿದ್ದಾರೆ. ಅದು ಹಿರಿಯ ನಾಯಕರ ಸಲಹೆಯ ಮೇರೆಗೆ ಮಾಡಿದ ತಪ್ಪುಗಳಾಗಿತ್ತು ಎಂದಿದ್ದಾರೆ. ಆದರೆ, ಅವರು ಯಾವುದೇ ವ್ಯಕ್ತಿಯ ಹೆಸರನ್ನು ಹೇಳಿಲ್ಲ.
ಸಭೆಯಲ್ಲಿ, ಎನ್ಡಿಎ ನಾಯಕರು ಒಟ್ಟಾಗಿ 220 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ಮೈತ್ರಿಯ ಬಲವನ್ನು ಬಲಪಡಿಸುವ ಸ್ಪಷ್ಟ ಉದ್ದೇಶವನ್ನು ಪುನರುಚ್ಛರಿಸಿದ್ದಾರೆ
ನಿತೀಶ್ ಕುಮಾರ್ ಅವರು ಎನ್ಡಿಎ ನಾಯಕರನ್ನು ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಇದೇ ರೀತಿಯ ಸಭೆಗಳನ್ನು ಆಯೋಜಿಸುವ ಮೂಲಕ ತಮ್ಮ ಪ್ರಭಾವವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ, ವೈಯಕ್ತಿಕ ಪಕ್ಷಗಳಿಗಿಂತ ಐಕ್ಯರಂಗವಾಗಿ ಕಾರ್ಯನಿರ್ವಹಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಸಭೆಯ ನಂತರ ಬಿಹಾರ ಘಟಕದ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಮಾತನಾಡಿ, 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್ಡಿಎ ಸ್ಪರ್ಧಿಸಲಿದೆ. 2020ರ ಚುನಾವಣೆಯಲ್ಲಿ ಗೆದ್ದಿರುವ ಸ್ಥಾನಗಳನ್ನು ಮೀರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಎನ್ಡಿಎ ಹೊಂದಿದೆ ಎಂದಿದ್ದಾರೆ.
ಸಭೆಯಲ್ಲಿ, ಮದ್ಯಪಾನ ನಿಷೇಧ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆಯಂತಹ ನೀತಿಗಳೊಂದಿಗೆ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವುದನ್ನು ಒಳಗೊಂಡಿರುವ ಪ್ರಮುಖ ವಿಷಯಗಳು ಕುರಿತು ಚರ್ಚೆಯನ್ನೂ ನಡೆಸಲಾಗಿದೆ.
ಮಹಾಮೈತ್ರಿಕೂಟವು ಬಿಹಾರದ ಜನರನ್ನು ದಾರಿತಪ್ಪಿಸಿದೆ ಮತ್ತು ಮೋಸ ಮಾಡಿದೆ ಎಂದು ಸಭೆಯಲ್ಲಿ ಎನ್ಡಿಎ ನಾಯಕರು ಹೇಳಿದ್ದು, ಪ್ರತಿಪಕ್ಷಗಳು ಹರಡುವ ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಎದುರಿಸಬೇಕೆಂದು ನಿತೀಶ್ ಕುಮಾರ್ ಎನ್ಡಿಎ ನಾಯಕರನ್ನು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.