ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಸಹಾಯ ಮಾಡಬಹುದು ಎಂದು ನಂಬಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಹೇಳಿದ್ದಾರೆ. “ಯಾವುದೇ ಸಂಘರ್ಷದಲ್ಲಿ ಅವರಿಗೆ ದೊಡ್ಡ ಮೌಲ್ಯವಿರುತ್ತದೆ. ಇದು ಭಾರತದ ದೊಡ್ಡ ಮೌಲ್ಯವಾಗಿದೆ” ಎಂದು ಅವರು ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಇತ್ತೀಚಿನ ಬ್ರಿಕ್ಸ್ ಶೃಂಗಸಭೆಯಲ್ಲಿ, ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಶಾಂತಿಗಾಗಿ ಕೆಲಸ ಮಾಡುವ ಬಯಕೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದರು. ಪ್ರಧಾನ ಮಂತ್ರಿಯವರ ಭಾಷಣದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಝೆಲೆನ್ಸ್ಕಿ, “ಜನಸಂಖ್ಯೆ, ಪ್ರಭಾವ ಮತ್ತು ಆರ್ಥಿಕತೆಯ ದೃಷ್ಟಿಕೋನದಿಂದ ಮೋದಿ ಅವರು ನಿಜವಾಗಿಯೂ ಬೃಹತ್ ದೇಶದ ಪ್ರಧಾನಿಯಾಗಿದ್ದಾರೆ. ಅಂತಹ ದೇಶವು ಕೇವಲ ಯುದ್ಧವನ್ನು ಅಂತ್ಯಗೊಳಿಸಲು ಆಸಕ್ತಿ ಹೊಂದಿದ್ದೇನೆ ಎಂದು ಹೇಳಬಾರದು. ನಾವೆಲ್ಲರೂ ಅದರಲ್ಲಿ ಆಸಕ್ತಿ ಹೊಂದಿದ್ದೇವೆ. ಎಲ್ಲಾ ನಾಯಕರು ಯುದ್ಧವನ್ನು ಕೊನೆಗೊಳಿಸಲು ಬಯಸುತ್ತಾರೆ. ಇದು ತುಂಬಾ ಸಾಮಾನ್ಯ ವಿಷಯವಾಗುತ್ತದೆ, ವಿಶೇಷವಾಗಿ ಭಾರತದಂತಹ ಬೃಹತ್ ದೇಶಕ್ಕೆ ಇದು ಸಾಮಾನ್ಯ ವಿಷಯ. ರಷ್ಯಾ ಸಾಮರ್ಥ್ಯವನ್ನು ಕುಗ್ಗಿಸಿ ಯುದ್ಧ ನಿಲ್ಲಿಸಲು ಭಾರತ ಮುಂದಾಗಬೇಕು” ಎಂದಿದ್ದಾರೆ.
ರಷ್ಯಾದ ಆರ್ಥಿಕತೆಯನ್ನು ತಡೆಯುವ ಮೂಲಕ ಭಾರತದಂತಹ ದೇಶಗಳು ಯುದ್ಧದ ಅಂತ್ಯವನ್ನು ಸುಲಭವಾಗಿ ಸುಗಮಗೊಳಿಸಬಹುದು ಎಂದು ಉಕ್ರೇನ್ ಅಧ್ಯಕ್ಷರು ಒತ್ತಿ ಹೇಳಿದ್ದಾರೆ.
“ರಷ್ಯಾದ ಆರ್ಥಿಕತೆಯನ್ನು ನಿರ್ಬಂಧಿಸುವುದು, ಅಗ್ಗದ ಇಂಧನ ಸಂಪನ್ಮೂಲವನ್ನು ನಿರ್ಬಂಧಿಸುವುದು, ರಷ್ಯಾದ ರಕ್ಷಣಾ-ಕೈಗಾರಿಕಾ ಸಂಕೀರ್ಣವನ್ನು ನಿರ್ಬಂಧಿಸುವುದು ನಮ್ಮ ವಿರುದ್ಧ ಯುದ್ಧಗಳನ್ನು ನಡೆಸುವ ಮಾಸ್ಕೋದ ಸಾಮರ್ಥ್ಯದದ ಇಳಿಕೆಗೆ ಕಾರಣವಾಗುತ್ತದೆ. 20 ಮಹಾನ್ ಆರ್ಥಿಕತೆಗಳು ಯುದ್ಧವನ್ನು ಕೊನೆಗೊಳಿಸಲು ಪುಟಿನ್ ಅವರ ಮೇಲೆ ಒತ್ತಡ ಹೇರಬಲ್ಲದು. ಈ ಮೂಲಕ ರಷ್ಯಾದ ಎಲ್ಲಾ ಆಸೆಗಳನ್ನು ನಿಧಾನಗೊಳಿಸಬಹುದು ಮತ್ತು ಶಾಂತಿಯನ್ನು ಸ್ಥಾಪಿಸಬಹುದು. ದೈನಂದಿನ ಯುದ್ಧವು ಜನರನ್ನು ಕೊಲ್ಲುತ್ತಿರುವ ಕಾರಣ ಭಾರತದಂತಹ ದೇಶಗಳು ಕಾರ್ಯನಿರ್ವಹಿಸಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.