News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಣೇಶ ಪೂಜೆಗೆ ಪ್ರಧಾನಿಗೆ ಆಹ್ವಾನ ನೀಡಿದ ಕುರಿತು ಮನಬಿಚ್ಚಿ ಮಾತನಾಡಿದ ಸಿಜೆಐ

ನವದೆಹಲಿ: ತನ್ನ ಮನೆಯಲ್ಲಿನ ಗಣೇಶ ಪೂಜೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದಕ್ಕೆ ಸಂಬಂಧಿಸಿದಂತೆ ಎದ್ದ ಭಾರೀ ರಾಜಕೀಯ ಗದ್ದಲದ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಇಂದು ಪ್ರತಿಕ್ರಿಯಿಸಿದ್ದು, ಅಂತಹ ಸಭೆಗಳಲ್ಲಿ ಯಾವುದೇ ನ್ಯಾಯಾಂಗ ವಿಷಯಗಳನ್ನು ಚರ್ಚಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಲೋಕಸತ್ತಾ ವಾರ್ಷಿಕ ಉಪನ್ಯಾಸದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ನಿಯಮಿತವಾಗಿ ಸಭೆಗಳನ್ನು ನಡೆಸುವುದು ಅಭ್ಯಾಸವಾಗಿದೆ ಎಂದಿದ್ದಾರೆ.

“ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಬುದ್ಧತೆ ಇದೆ, ಈ ಸಭೆಗಳ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಎಂದಿಗೂ ಬಾಕಿ ಇರುವ ಪ್ರಕರಣದ ಬಗ್ಗೆ ಕೇಳುವುದಿಲ್ಲ. ಆಗಸ್ಟ್ 14 ರಂದು ಮತ್ತು ಜನವರಿ 26 ರಂದು,  ಮದುವೆಗಳಲ್ಲಿ ಅಥವಾ ಶೋಕಾಚರಣೆಗಳಲ್ಲಿ ಮುಖ್ಯಮಂತ್ರಿ ಮತ್ತು ನ್ಯಾಯಮೂರ್ತಿಗಳು ಒಬ್ಬರನ್ನೊಬ್ಬರು ಭೇಟಿಯಾಗುತ್ತಾರೆ. ಇದರಿಂದ ನ್ಯಾಯಾಂಗದ ಕೆಲಸಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದಿದ್ದಾರೆ.

“ನ್ಯಾಯಾಂಗದ ಬಜೆಟ್ ರಾಜ್ಯದಿಂದ ಬರುತ್ತದೆ. ಈ ಬಜೆಟ್ ನ್ಯಾಯಾಧೀಶರಿಗೆ ಅಲ್ಲ.  ಹೊಸ ನ್ಯಾಯಾಲಯದ ಕಟ್ಟಡಗಳು, ನ್ಯಾಯಾಧೀಶರಿಗೆ ಹೊಸ ನಿವಾಸಗಳಿಗೆ ಬಜೆಟ್ ಬೇಕು, ಇದಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯಮಂತ್ರಿಗಳ ಸಭೆಗಳು ಅಗತ್ಯವಾಗಿರುತ್ತದೆ” ಎಂದಿದ್ದಾರೆ.

 ”ಮುಖ್ಯನ್ಯಾಯಮೂರ್ತಿಗಳು ನೇಮಕವಾದಾಗ ಮುಖ್ಯಮಂತ್ರಿಗಳ ಮನೆಗೆ ಹೋಗುತ್ತಾರೆ, ನಂತರ ಮುಖ್ಯಮಂತ್ರಿಗಳು ಮುಖ್ಯನ್ಯಾಯಮೂರ್ತಿಗಳ ಮನೆಗೆ ಬರುತ್ತಾರೆ, ಈ ಸಭೆಗಳಿಗೆ ಅಜೆಂಡಾ ಇರುತ್ತದೆ. ಯೋಜನೆಗಳ ಬಗ್ಗೆ,  ಮೂಲಸೌಕರ್ಯಗಳ ಬಗ್ಗೆ, ಈ ಯೋಜನೆಗಳ ಆದ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top