ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶುಕ್ರವಾರ ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಅವರೊಂದಿಗೆ ಸಮಗ್ರ ಮಾತುಕತೆ ನಡೆಸಿದರು ಮತ್ತು ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು.
ಅಲ್ಲದೇ ಜರ್ಮನಿಯ ವೈಸ್ ಚಾನ್ಸೆಲರ್ ರಾಬರ್ಟ್ ಹ್ಯಾಬೆಕ್ ಅವರನ್ನೂ ಭೇಟಿಯಾಗಿ ಉತ್ಪಾದಕ ಸಂವಾದವನ್ನು ಜೈಶಂಕರ್ ನಡೆಸಿದರು. ರಾಬರ್ಟ್ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಮ ಸಚಿವರೂ ಆಗಿದ್ದಾರೆ. ಈ ಚರ್ಚೆಗಳು ಏಳನೇ ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಗಳ (IGC) ಸಭೆಯ ಭಾಗವಾಗಿತ್ತು.
“ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ವ್ಯಾಪಕ ಚರ್ಚೆಗಳನ್ನು ನಡೆಸಿದ್ದೇವೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯು 25 ನೇ ವರ್ಷಕ್ಕೆ ಕಾಲಿಡುತ್ತಿರುವಾಗ ನಮ್ಮ ಸಂಬಂಧ ಗಾಢವಾಗುತ್ತಲೇ ಇದೆ” ಎಂದು ಜೈಶಂಕರ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
IGC ಸಭೆ ಯಶಸ್ವಿಯಾಗಿದೆ ಎಂದೂ ಸಂತೋಷ ವ್ಯಕ್ತಪಡಿಸಿದ್ದಾರೆ.
Delighted to meet FM @ABaerbock of Germany, after a successful IGC meeting earlier today.
Held wide – ranging discussions on a number of regional and global issues. Our strategic partnership continues to deepen as it enters its 25th year.
🇮🇳 🇩🇪 pic.twitter.com/dswoMpt6bp
— Dr. S. Jaishankar (@DrSJaishankar) October 25, 2024
A good conversation with German Vice Chancellor and Economic Affairs and Climate Action Minister Robert Habeck.
Exchanged views on contemporary global challenges, both strategic and economic.
🇮🇳 🇩🇪 pic.twitter.com/djnel2CjMH
— Dr. S. Jaishankar (@DrSJaishankar) October 25, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.