ವಾಷಿಂಗ್ಟನ್: ಪ್ರತಿ ಆರು ಜನರಲ್ಲಿ ಒಬ್ಬ ಭಾರತೀಯನಾಗಿರುವುದರಿಂದ ಭಾರತವು ವಿಶ್ವದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಬಯಸುತ್ತದೆ ಮತ್ತು ಜಗತ್ತು ಭಾರತದ ಆರ್ಥಿಕತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ವಾರ್ಷಿಕ ಸಭೆಗಳು 2024 ರ ಹಿನ್ನೆಲೆಯಲ್ಲಿ ಗ್ಲೋಬಲ್ ಡೆವಲಪ್ಮೆಂಟ್ ಸೆಂಟರ್ ವಾಷಿಂಗ್ಟನ್ ಡಿಸಿಯಲ್ಲಿ ಆಯೋಜಿಸಿದ್ದ ‘ಬ್ರೆಟನ್ ವುಡ್ಸ್ ಇನ್ಸ್ಟಿಟ್ಯೂಷನ್ಸ್ ಅಟ್ 80: ಪ್ರಿಯಾರಿಟಿಸ್ ಫಾರ್ ದಿ ನೆಕ್ಸ್ಟ್ ಡಿಕೇಡ್’ ಎಂಬ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿದ ಸೀತಾರಾಮನ್, ಯಾವ ದೇಶ ದೂರದಲ್ಲಿರುವ ಅಮೆರಿಕವಾಗಲಿ ಅಥವಾ ಅತ್ಯಂತ ಹತ್ತಿರದಲ್ಲಿರುವ ಚೀನಾವಾಗಲಿ ಭಾರತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
“ನಾವು ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ್ದೇವೆ, ಆದರೆ ನಮ್ಮ ಪ್ರಾಬಲ್ಯವನ್ನು ಹೇರಲು ಬಯಸುವುದಿಲ್ಲ. ಈಗ ನಾವು ನಮ್ಮ ಪ್ರಭಾವವನ್ನು ಹೆಚ್ಚಿಸಲು ಏಕೆ ಬಯಸುತ್ತೇವೆ ಎಂದರೆ ಇಂದು ವಿಶ್ವದ ಪ್ರತಿ ಆರು ವ್ಯಕ್ತಿಗಳಲ್ಲಿ ಒಬ್ಬರು ಭಾರತೀಯರಾಗಿದ್ದಾರೆ ಮತ್ತು ನಮ್ಮ ಆರ್ಥಿಕತೆ ಮತ್ತು ಅದು ಬೆಳೆಯುತ್ತಿರುವ ವಿಧಾನವನ್ನು ಯಾರೂ ನಿರ್ಲಕ್ಷಿಸಬಾರದು” ಎಂದಿದ್ದಾರೆ.
“ಇಂದು ಭಾರತದಲ್ಲಿ ಇರುವ ನುರಿತ ಮಾನವಶಕ್ತಿ ಎಲ್ಲೆಡೆ ದೊಡ್ಡ ಕಂಪನಿಗಳನ್ನು ನಡೆಸುತ್ತಿದೆ, ದೊಡ್ಡ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಂಸ್ಥೆಗಳನ್ನು ನಡೆಸುತ್ತಿದೆ” ಎಂದಿದ್ದಾರೆ.
ಭಾರತ ಯಾವಾಗಲೂ ಬಹುಪಕ್ಷೀಯ ಸಂಸ್ಥೆಗಳನ್ನು ಬೆಂಬಲಿಸುತ್ತದೆ ಮತ್ತು ಯಾವುದೇ ಬಹುಪಕ್ಷೀಯ ಸಂಸ್ಥೆಯನ್ನು ದುರ್ಬಲಗೊಳಿಸಲು ಯಾವುದೇ ಸಮಯದಲ್ಲಿ ಪ್ರಯತ್ನಿಸುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಹುಪಕ್ಷೀಯ ಸಂಸ್ಥೆಗಳಿಂದ ಯಾವುದೇ ಪರಿಹಾರಗಳು ಹೊರಬರದ ಕಾರಣ ಅವುಗಳ ಮೇಲಿನ ನಿರೀಕ್ಷೆಗಳು ಬಿರುಕು ಬಿಟ್ಟಿವೆ ಎಂದು ಅವರು ಹೇಳಿದರು.
Union Minister for Finance and Corporate Affairs Smt. @nsitharaman participates in a discussion on the 'Bretton Woods Institutions at 80: Priorities for the Next Decade', organised by the Center for Global Development @CGDev on the sidelines of the World Bank and IMF… pic.twitter.com/AuaOeSVOw0
— Ministry of Finance (@FinMinIndia) October 23, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.