ನವದೆಹಲಿ: ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ನವದೆಹಲಿಯಲ್ಲಿ ಇಂಟರ್ನ್ಯಾಷನಲ್ ಇನ್ಕಮಿಂಗ್ ಸ್ಪೂಫ್ಡ್ ಕಾಲ್ಸ್ ಪ್ರಿವೆನ್ಶನ್ ಸಿಸ್ಟಮ್ ಅನ್ನು ಪ್ರಾರಂಭಿಸಿದ್ದಾರೆ. ಭಾರತೀಯ ಟೆಲಿಕಾಂ ಚಂದಾದಾರರನ್ನು ತಲುಪುವ ಒಳಬರುವ ಅಂತರರಾಷ್ಟ್ರೀಯ ವಂಚನೆಯ ಕರೆಗಳನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಸಂವಹನ ಮತ್ತು ಟೆಲಿಕಾಂ ಸೇವೆಗಳ ಇಲಾಖೆ ಜಂಟಿಯಾಗಿ ಈ ವ್ಯವಸ್ಥೆಯನ್ನು ರೂಪಿಸಿದೆ.
ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸಿದ 24 ಗಂಟೆಗಳ ಒಳಗೆ, ಭಾರತೀಯ ಫೋನ್ ಸಂಖ್ಯೆಗಳೊಂದಿಗೆ ಸುಮಾರು 1.35 ಕೋಟಿ ಒಳಬಂದ ಅಂತರರಾಷ್ಟ್ರೀಯ ಕರೆಗಳನ್ನು ಟೆಲಿಕಾಂ ಸೇವಾ ಪೂರೈಕೆದಾರರು ವಂಚನೆ ಎಂದು ಗುರುತಿಸಿ ನಿರ್ಬಂಧಿಸಿದ್ದಾರೆ.
ಈ ವಂಚನೆಯ ಕರೆಗಳನ್ನು ಸಾಮಾನ್ಯವಾಗಿ ಹಣಕಾಸಿನ ವಂಚನೆಗಳಿಗೆ, ಸರ್ಕಾರಿ ಅಧಿಕಾರಿಗಳನ್ನು ಅನುಕರಿಸಿ ಮೋಸ ಮಾಡಲು ಮತ್ತು ಭೀತಿಯನ್ನು ಸೃಷ್ಟಿಸಲು ಬಳಸಲಾಗುತ್ತದೆ.
ಸೈಬರ್ ಕ್ರೈಮ್ ಅಡಿ ಬೆದರಿಕೆಯೊಡ್ಡುವ ಮೊಬೈಲ್ ಕರೆಗಳು, ನಕಲಿ ಡಿಜಿಟಲ್ ಬಂಧನಗಳು, ಕೊರಿಯರ್ಗಳಲ್ಲಿ ಡ್ರಗ್ಸ್ ಅಥವಾ ಮಾದಕ ದ್ರವ್ಯಗಳು, ಪೊಲೀಸ್ ಅಧಿಕಾರಿಗಳ ಸೋಗು ಹಾಕುವುದು ಮತ್ತು ಸೆಕ್ಸ್ ರಾಕೆಟ್ಗಳನ್ನು ನಡೆಸುವಂತಹ ಪ್ರಕರಣಗಳೂ ನಡೆಯುತ್ತಿವೆ. ಈಗಾಗಲೇ ಹಣ ಕಳೆದುಕೊಂಡವರು ಅಥವಾ ಸೈಬರ್ ಅಪರಾಧಕ್ಕೆ ಬಲಿಯಾದವರು ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಅಥವಾ https://www.cybercrime.gov.in ವೆಬ್ಸೈಟ್ನಲ್ಲಿ ವರದಿ ಮಾಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.