ಇಂಧೋರ್: ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದಂತೆ ʼಪಾಕಿಸ್ಥಾನ ಜಿಂದಾಬಾದ್ʼ ಘೋಷಣೆ ಕೂಗಿದ ಆರೋಪಿ ಫೈಝಲ್ ಖಾನ್ ಅಲಿಯಾಸ್ ಫೈಜಾನ್ ಮಂಗಳವಾರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿ 21 ಬಾರಿ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾನೆ.
ದೇಶವಿರೋಧಿ ಘೋಷಣೆಗಳನ್ನು ಕೂಗಿದ ಆರೋಪ ಹೊತ್ತಿರುವ ಖಾನ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾನೆ. ಪ್ರಕರಣದ ವಿಚಾರಣೆ ನಡೆಯುವವರೆಗೆ ತಿಂಗಳಿಗೆ ಎರಡು ಬಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿ ಭಾರತ್ ಮಾತಾ ಕೆ ಜೈ ಎಂದು ಘೋಷಣೆ ಕೂಗಬೇಕು ಎಂಬ ಷರತ್ತಿನ ಮೇರೆಗೆ ಆತನಿಗೆ ಜಾಮೀನು ನೀಡಲಾಗಿದೆ.
ಮಂಗಳವಾರ ಬೆಳಗ್ಗೆ ಅವನು ಭೋಪಾಲ್ನ ಮಿಸ್ರೋಡ್ ಪೊಲೀಸ್ ಠಾಣೆಗೆ ಆಗಮಿಸಿ ಹೆಚ್ಚಿನ ಭದ್ರತೆಯ ನಡುವೆ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿದ್ದಾನೆ. ಅಲ್ಲದೇ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದಾನೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಖಾನ್, “ನಾನು ತಪ್ಪು ಮಾಡಿದ್ದೇನೆ ಮತ್ತು ಈಗ ನನ್ನ ತಪ್ಪನ್ನು ಅರಿತುಕೊಂಡಿದ್ದೇನೆ. ನಾನು ಭಾರತೀಯನಾಗಿದ್ದೇನೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸುತ್ತೇನೆ ಮತ್ತು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತೇನೆ” ಎಂದು ಹೇಳಿದ್ದಾನೆ.
“ನಾನು ವಿಡಿಯೋಗಾಗಿ ದೇಶವಿರೋಧಿ ಘೋಷಣೆಗಳನ್ನು ಎಬ್ಬಿಸಿದ್ದೆ, ಆದರೆ ಆ ಸಮಯದಲ್ಲಿ ತಪ್ಪು ತನ್ನನ್ನು ಜೈಲಿಗೆ ಕೊಂಡೊಯ್ಯಬಹುದು ಎಂದು ತಿಳಿದಿರಲಿಲ್ಲ. ಈಗ, ನಾನು ನನ್ನ ಎಲ್ಲ ಸ್ನೇಹಿತರಲ್ಲಿ ದೇಶವಿರೋಧಿ ಘೋಷಣೆಗಳನ್ನು ಎತ್ತಬೇಡಿ ಅಥವಾ ರಾಷ್ಟ್ರಧ್ವಜವನ್ನು ಅಗೌರವಗೊಳಿಸದಂತೆ ವಿನಂತಿಸುತ್ತೇನೆ. ನಾನು ನನ್ನ ಜೀವನದಲ್ಲಿ ಮತ್ತೆ ಈ ತಪ್ಪನ್ನು ಮಾಡುವುದಿಲ್ಲ” ಎಂದಿದ್ದಾನೆ.
ಖಾನ್ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುವ ಮತ್ತು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದ್ದು, ಅದನ್ನು ಹೈಕೋರ್ಟ್ಗೆ ಹಾಜರುಪಡಿಸಲಾಗುವುದು ಎಂದು ಮಿಸ್ರೋಡ್ ಪೊಲೀಸ್ ಠಾಣೆ ಪ್ರಭಾರಿ ತಿಳಿಸಿದ್ದಾರೆ. ಜಾಮೀನಿಗಾಗಿ ಈ ಷರತ್ತನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ನ್ಯಾಯಾಲಯವು ಭೋಪಾಲ್ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.