ನವದೆಹಲಿ: ವಿಮಾನಯಾನ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಬಾಂಬ್ ಬೆದರಿಕೆಗಳನ್ನು ಎದುರಿಸಲು ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಯೋಜಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಸೋಮವಾರ ಘೋಷಿಸಿದ್ದಾರೆ. ಅಂತಹ ಬೆದರಿಕೆಗಳಿಗೆ ಹೊಣೆಗಾರರಾದ ಅಪರಾಧಿಗಳನ್ನು ನೊ-ಫ್ಲೈ ಪಟ್ಟಿಗೆ ಸೇರಿಸುವುದು ಇದರಲ್ಲಿ ಸೇರಿದೆ.
ವಿಮಾನಯಾನ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹಲವು ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ದುಷ್ಕರ್ಮಿಗಳಿಗೆ ಕಠಿಣ ಶೀಕ್ಷೆ ವಿಧಿಸಲು ಕಾನೂನು ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಹುಸಿ ಕರೆ ಮಾಡುವ ದುಷ್ಕರ್ಮಿಗಳನ್ನು ನೋ ಫ್ಲೈ ಲಿಸ್ಟ್ಗೆ ಸೇರಿಸಲು ಸರಕಾರವು ನಿಯಮಗಳನ್ನು ತಿದ್ದುಪಡಿ ಮಾಡಲು ಚಿಂತಿಸುತ್ತಿದೆ ಎಂದು ಸಚಿವ ಕೆ ರಾಮಮೋಹನ್ ನಾಯ್ಡು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಯ್ಡು, ವಾಯುಯಾನ ಭದ್ರತಾ ನಿಯಮಗಳಿಗೆ ತಿದ್ದುಪಡಿಗಳನ್ನು ತರಲು ಯೋಜಿಸಲಾಗಿದೆ ಎಂದಿದ್ದಾರೆ.
“ಸಚಿವಾಲಯದಿಂದ, ಅಗತ್ಯವಿದ್ದರೆ ನಾವು ಕೆಲವು ಕಾನೂನುಗ ಕ್ರಮಗಳ ಬಗ್ಗೆ ಯೋಚಿಸಿದ್ದೇವೆ. ಏರ್ಕ್ರಾಫ್ಟ್ ಸೆಕ್ಯುರಿಟಿ ನಿಯಮಗಳಲ್ಲಿ ತಿದ್ದುಪಡಿ ತರುವುದು ನಮ್ಮ ಮುಂದಿರುವ ಆಯ್ಕೆ. ಈ ನಿಯಮಗಳನ್ನು ಬದಲಾಯಿಸುವ ಮೂಲಕ ದುಷ್ಕರ್ಮಿಗಳನ್ನು ಹಾರಾಟ ನಿಷೇಧ ಪಟ್ಟಿಗೆ ಸೇರಿಸುವುದು. ನಾಗರಿಕ ವಿಮಾನಯಾನ ಕಾಯ್ದೆಯ ಸುರಕ್ಷತೆಯ ವಿರುದ್ಧ ಕಾನೂನುಬಾಹಿರ ಕಾಯ್ದೆಗಳ ನಿಗ್ರಹ, ”ನಾಯ್ಡು ಹೇಳಿದ್ದಾರೆ.
ಕಳೆದ ಒಂದು ವಾರದಲ್ಲಿ ವಿಮಾನಗಳಿಗೆ 100 ಹುಸಿ ಬೆದರಿಕೆ ಕರೆಗಳು ಬಂದಿವೆ. ಇದು ಸರ್ಕಾರಕ್ಕೆ ದೊಡ್ಡ ಕಗ್ಗಂಟಾಗಿದೆ. ಆದರೆ ಕುಚೇಷ್ಟೆಗಾಗಿ ಇಂತಹ ಕರೆಗಳನ್ನು ಮಾಡಲಾಗುತ್ತಿದೆ. ಇದರ ಹಿಂದೆ ಪಿತೂರಿ ಇಲ್ಲ ಎಂದು ಸಚಿವರು ಇತ್ತೀಚಿಗೆ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.