ನವದೆಹಲಿ: ವಸಾಹತುಶಾಹಿ ಆಡಳಿತದ ಸಂಕೇತವಾಗಿದ್ದ ನ್ಯಾಯಾಲಯಗಳಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ, ಒಂದು ಕೈಯಲ್ಲಿ ತಕ್ಕಡಿ ಮತ್ತು ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದಿರುವ ನ್ಯಾಯದೇವತೆಯ ಪ್ರತಿಮೆಯನ್ನು ಬದಲಾಯಿಸಲಾಗಿದೆ. ಹೊಸದಾಗಿ ಅನಾವರಣಗೊಂಡ ಪ್ರತಿಮೆಯ ಕಣ್ಣಿಗೆ ಬಟ್ಟೆ ಇಲ್ಲ, ಕೈಯಲ್ಲಿ ಖಡ್ಗದ ಬದಲಿಗೆ ಸಂವಿಧಾನವನ್ನು ನೀಡಲಾಗಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರು ನಿನ್ನೆ ಹೊಸ ನ್ಯಾಯದೇವತೆಯ ಪ್ರತಿಮೆಯನ್ನು ನ್ಯಾಯಾಧೀಶರ ಗ್ರಂಥಾಲಯದಲ್ಲಿ ಅನಾವರಣ ಮಾಡಿದ್ದು, ಕಣ್ಣಿಗೆ ಕಟ್ಟಿದ್ದ ಕಪ್ಪು ಪಟ್ಟಿಯನ್ನು ತೆಗೆಯಲಾಗಿದೆ. ಕೈಯಲ್ಲಿದ್ದ ಖಡ್ಗದ ಬದಲು ಸಂವಿಧಾನವನ್ನು ನೀಡಲಾಗಿದೆ. ಇದನ್ನು ದೇಶದ ಎಲ್ಲಾ ನ್ಯಾಯಾಲಯಗಳಲ್ಲೂ ಪ್ರತಿಷ್ಠಾಪಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ.
ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ ನ್ಯಾಯದೇವತೆ ಮೂಲತಃ ರೋಮ್ ಸಾಮ್ರಾಜ್ಯದ ಕಲ್ಪನೆ. ಅಲ್ಲಿಂದ ಎರವಲು ಪಡೆದ ಬ್ರಿಟಿಷರು ಭಾರತಕ್ಕೂ ತಂದು ನ್ಯಾಯಾಲಯಗಳಲ್ಲಿ ಪ್ರತಿಷ್ಠಾಪಿಸಿದರು. ಈಗ ಭಾರತದ ನ್ಯಾಯಾಂಗ ವ್ಯವಸ್ಥೆಯು ಇದನ್ನು ತೊಡೆದು ಹಾಕಿ ಅಲ್ಲಿಯೂ ಭಾರತೀಕರಣವನ್ನು ಮರುಸ್ಥಾಪಿಸುವತ್ತ ಹೆಜ್ಜೆ ಇಟ್ಟಿರುವುದು ಮಹತ್ವದ ಸಂಗತಿ.
https://x.com/BimalGST/status/1846600995171975188?ref_src=twsrc%5Etfw%7Ctwcamp%5Etweetembed%7Ctwterm%5E1846600995171975188%7Ctwgr%5E2bc484216197507cb4eeba9beda1cc5f112c5f90%7Ctwcon%5Es1_&ref_url=https%3A%2F%2Fwww.hindustantimes.com%2Ftrending%2Fsupreme-court-unveils-new-justice-statute-without-blindfold-to-say-that-law-is-not-blind-101729129825932.html%3Futm_source%3Dmicrosoft-ht
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.