ನವದೆಹಲಿ: ಅಕ್ಟೋಬರ್ 15, 1931 ರಂದು, ತಮಿಳುನಾಡಿನ ರಾಮೇಶ್ವರಂ ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿದ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಭಾರತ ಕಂಡ ಮಹಾನ್ ಸಾಧಕರಲ್ಲಿ ಒಬ್ಬರಾಗಿ ರಾರಾಜಿಸಿದರು. ಭಾರತದ 11 ನೇ ರಾಷ್ಟ್ರಪತಿಯಾಗಿ, ಮಹಾನ್ ವಿಜ್ಞಾನಿಯಾಗಿ, ಶಿಕ್ಷಕನಾಗಿ ಅವರು ಈ ದೇಶಕ್ಕೆ ನೀಡಿದ ಕೊಡುಗೆ ಅಪ್ರತಿಮವಾದುದು. ಅವರ ಜನ್ಮದಿನವನ್ನು ಇಂದು ದೇಶ ಅತ್ಯಂತ ಪ್ರೀತಿಯಿಂದ ಆಚರಿಸುತ್ತಿದೆ, ಅವರ ಕೊಡುಗೆಗಳನ್ನು ಶ್ಲಾಘಿಸುತ್ತಿದೆ.
ಅ.15 ಅನ್ನು ಕಲಾಂ ಅವರ ಗೌರವಾರ್ಥ “ವಿಶ್ವ ವಿದ್ಯಾರ್ಥಿಗಳ ದಿನ”ವನ್ನಾಗಿಯೂ ಆಚರಿಸಲಾಗುತ್ತದೆ. ಕಲಾಂ ಅವರಿಗೆ ವಿದ್ಯಾರ್ಥಿಗಳೆಂದರೆ ಅಚ್ಚುಮೆಚ್ಚು. ಶಿಕ್ಷಣದ ಬಗ್ಗೆ, ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿ ಮಾಡುವ ಬಗ್ಗೆ, ಅವರಿಗೆ ಸ್ಪೂರ್ತಿ ನೀಡುವ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ದರು. ಕೊನೆಯ ಉಸಿರು ಇರುವವರೆಗೂ ನಾನು ಶಿಕ್ಷಕನಾಗಿರುತ್ತೇನೆ ಎಂದು ಕಲಾಂ ಹೇಳುತ್ತಿದ್ದರು. ಅಲ್ಲದೇ ಶಿಕ್ಷಕನಾಗಿಯೇ ಗುರುತಿಸಿಕೊಳ್ಳುವುದು ಅವರ ಇಚ್ಛೆಯೂ ಆಗಿತ್ತು.
ವಿದ್ಯಾರ್ಥಿಗಳ ಮೇಲಿನ ಕಲಾಂ ಅವರ ಪ್ರೀತಿ ಮತ್ತು ಶಿಕ್ಷಣದ ಬಗ್ಗೆ ಅವರಿಗಿದ್ದ ಮಹತ್ವಾಕಾಂಕ್ಷೆಯನ್ನು ಗುರುತಿಸಲು ವಿಶ್ವ ವಿದ್ಯಾರ್ಥಿಗಳ ದಿನವನ್ನು ಅವರ ಹುಟ್ಟುಹಬ್ಬದಂದೇ ಆಚರಿಸಲಾಗುತ್ತದೆ. ಬಾಹ್ಯಾಕಾಶ ವಿಜ್ಞಾನಿಯಾಗಿ, ಶಿಕ್ಷಕನಾಗಿ, ರಾಷ್ಟ್ರಪತಿಯಾಗಿ ಅವರು ನೀಡಿದ ಕೊಡುಗೆಗೆ ಭಾರತೀಯರು ಸದಾ ಚಿರರುಣಿಗಳಾಗಿರುತ್ತಾರೆ.
सुप्रसिद्ध वैज्ञानिक और पूर्व राष्ट्रपति डॉ. एपीजे अब्दुल कलाम जी को उनकी जयंती पर आदरपूर्ण श्रद्धांजलि। उनका विजन और चिंतन विकसित भारत के संकल्प की सिद्धि में देश के बहुत काम आने वाला है। pic.twitter.com/g36gwh94Y9
— Narendra Modi (@narendramodi) October 15, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.