ನವದೆಹಲಿ: ಪಾಕಿಸ್ತಾನವು ಚೀನಾದಿಂದ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ಬೆಂಬಲವನ್ನು ಪಡೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು, ಅಂತರರಾಷ್ಟ್ರೀಯ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿರುವ ಆರ್ಥಿಕತೆಯು ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಹಣವನ್ನು ಹೀಗೂ ಸಂಗ್ರಹಿಸಬಹುದು ಎಂಬುದು ತುಂಬಾ ಆಶ್ಚರ್ಯ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ವಿಶೇಷ ಸಂದರ್ಶನ ನೀಡಿದ ಭಾರತೀಯ ನೌಕಾಪಡೆ ಮುಖ್ಯಸ್ಥರು, ಪಾಕಿಸ್ತಾನ ನೌಕಾಪಡೆಯಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಿಗಾ ಇಡಲಾಗುತ್ತಿದೆ ಎಂದು ಹೇಳಿದ್ದಾರೆ.
“ಕುಗ್ಗುತ್ತಿರುವ ಮತ್ತು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿರುವ ಆರ್ಥಿಕತೆಯೊಂದು ತನ್ನ ಸಶಸ್ತ್ರ ಪಡೆಗಳನ್ನು ಆಧುನೀಕರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಧಿಯನ್ನು ಒಟ್ಟುಗೂಡಿಸುತ್ತಿರುವ ಬಗೆ ಆಶ್ಚರ್ಯಕರವಾಗಿದೆ ಎಂದು ನಾನು ಭಾವಿಸುತ್ತೇನೆ. ಪಾಕಿಸ್ತಾನದ ನೌಕಾಪಡೆಯಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ನಾವು ಕಣ್ಗಾವಲು ಇರಿಸಿದ್ದೇವೆ. ವಿವಿಧ ಮೂಲಗಳಿಂದ ಯಾವ ರೀತಿಯ ಶಸ್ತ್ರಾಸ್ತ್ರಗಳು ಮತ್ತು ವೇದಿಕೆಗಳನ್ನು ಅದು ಪಡೆಯುತ್ತಿದೆ ಮತ್ತು ಈ ಪ್ರದೇಶದಲ್ಲಿನ ಕಡಲ ಭದ್ರತೆ ಮತ್ತು ನಮ್ಮ ರಾಷ್ಟ್ರೀಯ ಕಡಲ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನಾವು ಕಾರ್ಯತಂತ್ರವನ್ನು ಹೇಗೆ ರೂಪಿಸಿದ್ದೇವೆ ಎಂಬ ಬಗ್ಗೆಯೂ ನಾವು ಜಾಗರೂಕರಾಗಿದ್ದೇವೆ” ಎಂದಿದ್ದಾರೆ.
ಪಾಕಿಸ್ತಾನವು ಚೀನಾದಿಂದ ಉಪಕರಣಗಳು ಮತ್ತು ಶಸ್ತ್ರಾಸ್ತ್ರ ಬೆಂಬಲವನ್ನು ಪಡೆಯುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಚೀನಾಕ್ಕೆ ಸಂಬಂಧಿಸಿದಂತೆ, ಸಂಖ್ಯೆಗಳ ದೃಷ್ಟಿಯಿಂದ ಅದು ಅತಿದೊಡ್ಡ ನೌಕಾಪಡೆಯಾಗಿದೆ ಎಂದು ನಿಮಗೆ ಸಂಪೂರ್ಣವಾಗಿ ತಿಳಿದಿದೆ. ಅದನ್ನೂ ನಾವು ಟ್ರ್ಯಾಕ್ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು.
ಭಾರತೀಯ ಶಿಪ್ಯಾರ್ಡ್ಗಳಲ್ಲಿ 63 ಹಡಗುಗಳನ್ನು ನಿರ್ಮಿಸಲಾಗುತ್ತಿದೆ, ಇದರಲ್ಲಿ ರಕ್ಷಣಾ ಸಾರ್ವಜನಿಕ ವಲಯದ ಡಿಪಿಎಸ್ಯುಗಳು, ಪಿಎಸ್ಯುಗಳು ಮತ್ತು ಖಾಸಗಿ ಉದ್ಯಮಗಳಾದ ಎಲ್ & ಟಿ ಸೇರಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.