ನವದೆಹಲಿ: ಹರಿಯಾಣದ ಸೋಲಿನಿಂದ ಆಘಾತವನ್ನು ಅನುಭವಿಸಿರುವ ಕಾಂಗ್ರೆಸ್ ಪಕ್ಷ ಈಗ ಮಿತ್ರಪಕ್ಷಗಳಿಂದ ಬುದ್ಧಿಮಾತು ಕೇಳಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿಕೊಂಡಿದೆ. ಇಂಡಿ ಮೈತ್ರಿಯ ನಡುವೆ ಆತ್ಮಾವಲೋಕನ ಮತ್ತು ಉತ್ತಮ ಸಮನ್ವಯವನ್ನು ಬಯಸುತ್ತಿರುವುದಾಗಿ ಮತ್ತು ಪ್ರಮುಖ ಚುನಾವಣೆಗಗಳಲ್ಲಿ ಮೈತ್ರಿ ಪಾಲುದಾರರನ್ನು ನಿರ್ಲಕ್ಷ್ಯ ಮಾಡುವುದರ ವಿರುದ್ಧ ಕಾಂಗ್ರೆಸ್ಗೆ ಎಚ್ಚರಿಕೆ ನೀಡುತ್ತಿವೆ.
ಇಂಡಿ ಒಕ್ಕೂಟದ ಪಾಲುದಾರರು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಬಿಸಿ ಮುಟ್ಟಿಸಿದ್ದು, ಮುಂಬರುವ ರಾಜ್ಯ ಚುನಾವಣೆಗಳಲ್ಲಿ ಸಮಾನ ಮೈತ್ರಿಗೆ ಒತ್ತಡ ಹೆಚ್ಚಿಸಿದ್ದಾರೆ.
ಪಕ್ಷವು ಹರಿಯಾಣದಲ್ಲಿ ಆಘಾತಕಾರಿ ಸೋಲು ಅನುಭವಿಸಿದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳಪೆ ಪ್ರದರ್ಶನ ನೀಡಿದ ತರುವಾಯ ಮೈತ್ರಿಗಳಿಗೆ ಕಾಂಗ್ರೆಸ್ ಮೇಲೆ ಭರವಸೆ ಇಲ್ಲದಂತಾಗಿದೆ. ಹರಿಯಾಣದಲ್ಲಿ ಎಎಪಿ ಜೊತೆ ಪಾಲುದಾರಿಕೆ ಮಾಡಿಕೊಳ್ಳಲೂ ಕಾಂಗ್ರೆಸ್ ನಿರಾಕರಿಸಿತ್ತು.
ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ಈ ವರ್ಷದ ಕೊನೆಯಲ್ಲಿ ನಿರ್ಣಾಯಕ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಇಲ್ಲಿ ಕಾಂಗ್ರೆಸ್ ಮೇಲೆ ಸವಾರಿ ನಡೆಸುವ ಎಲ್ಲಾ ಲಕ್ಷಣಗಳನ್ನು ಮಿತ್ರ ಪಕ್ಷಗಳು ತೋರಿಸುತ್ತಿವೆ. ಕಾಂಗ್ರೆಸ್ ಹೆಚ್ಚು ಸ್ಥಾನಗಳಿಗೆ ಚೌಕಾಶಿ ಮಾಡುವ ಅವಕಾಶವನ್ನೂ ಹರಿಯಾಣ ಚುನಾವಣೆ ಬಳಿಕ ಕಳೆದುಕೊಂಡಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಗುರುತನ್ನು ತಲುಪದಂತೆ ತಡೆದ ಬಳಿಕ ಇಂಡಿ ಒಕ್ಕೂಟ ತನ್ನ ಛಾಉ ಮೂಡಿಸಲು ಆರಂಭಿಸಿತ್ತು. ಆದರೆ ಹರಿಯಾಣ ಫಲಿತಾಂಶವು ಕೇವಲ ಹಳೆಯ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೆ ಇಡಿ ಒಕ್ಕೂಟಕ್ಕೂ ಹೊಡೆತ ನೀಡಿದೆ.
ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ತೃಣಮೂಲ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ರಾಷ್ಟ್ರೀಯ ಜನತಾ ದಳದಿಂದ ಹಿಡಿದು ಇಂಡಿ ಬ್ಲಾಕ್ ಪಾಲುದಾರರ ವ್ಯಾಪಕ ಶ್ರೇಣಿಯ ನಾಯಕರು ಬುಧವಾರ ಕಾಂಗ್ರೆಸ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಕರೆ ನೀಡಿದ್ದಾರೆ ಮತ್ತು ತನ್ನ ಪಾಲುದಾರರನ್ನು ಕಡೆಗಣಿಸುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.