ನವದೆಹಲಿ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಶೃಂಗಸಭೆ 2024 ರಲ್ಲಿ ಭಾಗವಹಿಸುವ ಉದ್ದೇಶಕ್ಕಾಗಿ ಅಕ್ಟೋಬರ್ 15-16ರಂದು ಪಾಕಿಸ್ಥಾನಕ್ಕೆ ತೆರಳಲಿದ್ದಾರೆ. ಆದರೆ ಈ ಭೇಟಿಯ ವೇಳೆ ಭಾರತ-ಪಾಕಿಸ್ತಾನ ಸಂಬಂಧಗಳ ಕುರಿತು ಯಾವುದೇ ಚರ್ಚೆ ನಡೆಯುವ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
“SCO ಯ ಉತ್ತಮ ಸದಸ್ಯನಾಗಿ ಭಾರತದ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಪೂರೈಸಲು ಪಾಕಿಸ್ತಾನದಲ್ಲಿ ನನ್ನ ಉಪಸ್ಥಿತಿಯು ಇರಲಿದೆ” ಎಂದು ಅವರು ಒತ್ತಿ ಹೇಳಿದ್ದಾರೆ.
“ಹೌದು, ನಾನು ಈ ತಿಂಗಳ ಮಧ್ಯದಲ್ಲಿ ಪಾಕಿಸ್ತಾನಕ್ಕೆ ಹೋಗಲಿದ್ದೇನೆ ಮತ್ತು ಅದು ಎಸ್ಸಿಒ – ಸರ್ಕಾರದ ಮುಖ್ಯಸ್ಥರ ಸಭೆಗಾಗಿ ಮಾತ್ರ” ಎಂದು ಐಸಿ ಸೆಂಟರ್ ನವದೆಹಲಿಯಲ್ಲಿ ಆಯೋಜಿಸಿದ್ದ ಆಡಳಿತದ ಕುರಿತು ಸರ್ದಾರ್ ಪಟೇಲ್ ಉಪನ್ಯಾಸವನ್ನು ನೀಡುವಾಗ ಜೈಶಂಕರ್ ಹೇಳಿದರು.
“ಭಾರತ-ಪಾಕಿಸ್ಥಾನ ಸಂಬಂಧದ ಸ್ವರೂಪವು ವಿಭಿನ್ನವಾಗಿರುವುದರಿಂದ ಸಹವಾಗಿಯೇ ನನ್ನ ಪಾಖಿಸ್ಥಾನ ಭೇಟಿಯ ಬಗ್ಗೆ ಬಹಳಷ್ಟು ಮಾಧ್ಯಮ ಆಸಕ್ತಿ ಇರುತ್ತದೆ. ಆದರೆ ನಾನು ಬಹುಪಕ್ಷೀಯ ಕಾರ್ಯಕ್ರಮಕ್ಕಾಗಿ ಅಲ್ಲಿ ಇರುತ್ತೇನೆ, ಅಂದರೆ ನಾನು ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆ ಚರ್ಚಿಸಲು ಹೋಗುತ್ತಿಲ್ಲ, ವಿನಯಶೀಲ ಮತ್ತು ನಾಗರಿಕ ವ್ಯಕ್ತಿಯಾಗಿ ನಾನು ಅಲ್ಲಿಗೆ ಹೋಗುತ್ತೇನೆ” ಎಂದು ಅವರು ಹೇಳಿದರು.
ಈ ಬಾರಿ ಇಸ್ಲಾಮಾಬಾದ್ನಲ್ಲಿ ಎಸ್ಸಿಒ ಶೃಂಗಸಭೆ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೈಲೈಟ್ ಮಾಡಿದರು, ಏಕೆಂದರೆ ಭಾರತದಂತೆಯೇ ಪಾಕಿಸ್ತಾನವೂ ಕೂಡ ಎಸ್ಸಿಒದ ಇತ್ತೀಚಿನ ಸದಸ್ಯ ರಾಷ್ಟ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.