ಪಿಥೋರಗಢ: ಯಾತ್ರಾರ್ಥಿಗಳು ಗುರುವಾರ ಭಾರತದ ಭೂಪ್ರದೇಶದೊಳಗಿನಿಂದ ಮೊದಲ ಬಾರಿಗೆ ಶಿವನ ವಾಸಸ್ಥಾನವೆಂದು ನಂಬಲಾದ ಪವಿತ್ರ ಕೈಲಾಸ ಶಿಖರವನ್ನು ವೀಕ್ಷಣೆ ಮಾಡಿದರು. ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯ ವ್ಯಾಸ್ ಕಣಿವೆಯಲ್ಲಿರುವ ಹಳೆಯ ಲಿಪುಲೇಖ್ ಪಾಸ್ ಮೂಲಕ ಕೈಲಾಸ ವೀಕ್ಷಣೆ ಮಾಡಲಾಗಿದೆ. ಈ ಪ್ರದೇಶ ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ.
ಇದಕ್ಕೂ ಮೊದಲು, ಯಾತ್ರಿಕರು ಕೈಲಾಸದ ವೀಕ್ಷಣೆಗಾಗಿ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ಪ್ರಯಾಣಿಸಬೇಕಾಗಿತ್ತು. ಆದರೆ ಮೊದಲ ಬಾರಿಗೆ ಭಾರತದ ಪ್ರದೇಶದ ಒಳಗಿನಿಂದ ಕೈಲಾಸ ಶಿಖರವನ್ನು ವೀಕ್ಷಿಸುವ ಅವಕಾಶ ಶಿವಭಕ್ತರಿಗೆ ಒಲಿದಿದೆ.
“ಐದು ಯಾತ್ರಾರ್ಥಿಗಳ ಮೊದಲ ಬ್ಯಾಚ್ ಓಲ್ಡ್ ಲಿಪುಲೇಖ್ ಪಾಸ್ನಿಂದ ಕೈಲಾಸ ಶಿಖರದ ನೋಟವನ್ನು ವೀಕ್ಷಿಸುವ ಮೂಲಕ ಭಾವನಾತ್ಮಕವಾಗಿ ಅಗಾಧ ಅನುಭವ ಪಡೆದುಕೊಂಡಿದೆ” ಎಂದು ಪಿಥೋರಗಡ್ನ ಜಿಲ್ಲಾ ಪ್ರವಾಸಿ ಅಧಿಕಾರಿ ಕೃತಿ ಚಂದ್ರ ಆರ್ಯ ಹೇಳಿದ್ದಾರೆ. ಅವರು ಬುಧವಾರ ಗುಂಜಿ ಶಿಬಿರವನ್ನು ತಲುಪಿದರು. ಶಿಖರದ ವೀಕ್ಷಣೆಗಾಗಿ ಅವರು ಓಲ್ಡ್ ಲಿಪುಲೇಖ್ ಪಾಸ್ಗೆ 2.5 ಕಿಮೀ ಚಾರಣ ಮಾಡಿದ್ದಾರೆ.
“ಎಲ್ಲಾ ಐವರು ಯಾತ್ರಾರ್ಥಿಗಳು ತುಂಬಾ ಉತ್ಸುಕರಾಗಿದ್ದರು ಮತ್ತು ಓಲ್ಡ್ ಲಿಪುಲೇಖ್ ಪಾಸ್ನಲ್ಲಿ ಸಿದ್ಧಪಡಿಸಿದ ಸ್ಥಳದಿಂದ ಪವಿತ್ರ ಕೈಲಾಸ ಶಿಖರವನ್ನು ವೀಕ್ಷಿಸಿದಾಗ ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು” ಎಂದು ಯಾತ್ರಾರ್ಥಿಗಳೊಂದಿಗೆ ಬಂದವರು ಹೇಳಿದ್ದಾರೆ.
ಬ್ಯಾಚ್ನಲ್ಲಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಿಂದ ನೀರಜ್ ಮತ್ತು ಮೋಹಿನಿ, ಚಂಡೀಗಢದ ಅಮನದೀಪ್ ಕುಮಾರ್ ಜಿಂದಾಲ್ ಮತ್ತು ರಾಜಸ್ಥಾನದ ಶ್ರೀ ಗಂಗಾನಗರದ ಕೇವಲ್ ಕ್ರಿಶನ್ ಮತ್ತು ನರೇಂದ್ರ ಕುಮಾರ್ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.