ನವದೆಹಲಿ: ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ತೆಯಾದ 5,600 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪ್ರಕರಣದ ಕಿಂಗ್ಪಿನ್ ದೆಹಲಿ ಯುವ ಕಾಂಗ್ರೆಸ್ನ ಆರ್ಟಿಐ ಸೆಲ್ನ ಮುಖ್ಯಸ್ಥ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ವಕ್ತಾರ ಮತ್ತು ಸಂಸದ ಸುಧಾಂಶು ತ್ರಿವೇದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೇಶವನ್ನು ನಾಶಪಡಿಸುವಲ್ಲಿ ತೊಡಗಿರುವ ಡ್ರಗ್ ಡೀಲರ್ಗಳೊಂದಿಗೆ ಕಾಂಗ್ರೆಸ್ ಸಂಪರ್ಕವಿದೆ ಎಂದು ಆರೋಪಿಸಿದರು ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈ ಬಗ್ಗೆ ವಿವರಣೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಾದಕ ದ್ರವ್ಯದ ಹಣವನ್ನು ಕಾಂಗ್ರೆಸ್ ತನ್ನ ಪ್ರಚಾರಕ್ಕೆ ಬಳಸುತ್ತಿದೆಯೇ ಮತ್ತು ಆಪಾದಿತ ಕಿಂಗ್ಪಿನ್ ತುಷಾರ್ ಗೋಯಲ್ ಅವರೊಂದಿಗಿನ ಪಕ್ಷದ ಸಂಬಂಧವು ವ್ಯವಹಾರಕ್ಕೂ ವಿಸ್ತರಿಸಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಒಂದು ವೇಳೆ ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಡ್ರಗ್ಸ್ ಡೀಲರ್ಗಳಿಗೆ ಮುಕ್ತ ಸ್ವಾತಂತ್ರ್ಯ ದೊರೆಯಲಿದೆ ಎಂದಿದ್ದಾರೆ. ಅಲ್ಲದೇ ಡ್ರಗ್ ಡೀಲರ್ಗಳು ಮತ್ತು ಕಾಂಗ್ರೆಸ್ ನಡುವೆ ಏನಾದರೂ ವ್ಯವಸ್ಥೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ತುಷಾರ್ ಗೋಯಲ್ ಹಿರಿಯ ಕಾಂಗ್ರೆಸ್ ನಾಯಕರಾದ ಕೆ ಸಿ ವೇಣುಗೋಪಾಲ್ ಮತ್ತು ದೀಪೇಂದರ್ ಸಿಂಗ್ ಹೂಡಾ ಅವರೊಂದಿಗೆ ಫೋಟೋ ತೆಗೆಸಿಕೊಂಡಿರುವುದು ಮಾತ್ರವಲ್ಲದೆ ಹೂಡಾ ಅವರ ಮೊಬೈಲ್ ಸಂಖ್ಯೆಯನ್ನು ಸಹ ಹೊಂದಿದ್ದಾನೆ. ಈ ಬಗ್ಗೆ ಹೂಡಾ ಕುಟುಂಬದವರು ಕೂಡ ವಿವರಣೆ ನೀಡಬೇಕು ಎಂದಿದ್ದಾರೆ.
ದೆಹಲಿ ಯುವ ಕಾಂಗ್ರೆಸ್ನ ಆರ್ಟಿಐ ಸೆಲ್ನ ಮುಖ್ಯಸ್ಥರಾಗಿ ಗೋಯಲ್ ನೇಮಕಾತಿ ಪತ್ರವನ್ನು ತ್ರಿವೇದಿ ಅವರು ಮಾಧ್ಯಮದ ಮುಂದೆ ಪ್ರದರ್ಶಿಸಿದ್ದು, ಅದರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ ಎಂದು ಹೇಳಿದ್ದಾರೆ.
My Press Conference today @BJP4India Head Office New Delhihttps://t.co/SyjiZrYNXX pic.twitter.com/Olxas1agD8
— Dr. Sudhanshu Trivedi (@SudhanshuTrived) October 3, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.